ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜುಗಳಿಗೆ ಸ್ವಾಯತ್ತತೆ, ಪರೀಕ್ಷಾಪದ್ಧತಿ ಬದಲಾಗಲಿ -ಕಾರ್ಯಪಡೆ

By Staff
|
Google Oneindia Kannada News

ಕಾಲೇಜುಗಳಿಗೆ ಸ್ವಾಯತ್ತತೆ, ಪರೀಕ್ಷಾಪದ್ಧತಿ ಬದಲಾಗಲಿ -ಕಾರ್ಯಪಡೆ
ಪದವಿಯ ಮೊದಲೆರಡು ವರ್ಷಗಳಲ್ಲಿ ಆಂತರಿಕ ಪರೀಕ್ಷೆಗಳು ಸಾಕು

ಬೆಂಗಳೂರು : ಪರೀಕ್ಷಾ ಪದ್ಧತಿಯಲ್ಲಿ ವ್ಯಾಪಕ ಬದಲಾವಣೆಗಳು, ಕಾಲೇಜುಗಳಿಗೆ ಸ್ವಾಯತ್ತತೆ ಹಾಗೂ ದೂರಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳನ್ನು ಕಲ್ಪಿಸುವಂತೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ್ದ ಕಾರ್ಯಪಡೆ ತನ್ನ ವರದಿಯಲ್ಲಿ ತಿಳಿಸಿದೆ.

ಯೋಜನಾ ಆಯೋಗದ ಅಧ್ಯಕ್ಷ ಎಂ.ಆರ್‌.ಶ್ರೀನಿವಾಸನ್‌ ನೇತೃತ್ವದ ಕಾರ್ಯಪಡೆ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಶೀಘ್ರವೇ ಸಂಪುಟ ಸಭೆಯ ಮುಂದಿಡಲಾಗುವುದು. ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಸಂಪುಟ ಉಪ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸನ್‌- ದೂರಶಿಕ್ಷಣವನ್ನು ಉತ್ತಮಗೊಳಿಸಬೇಕಾದ ಹಾಗೂ ವ್ಯಾಪಕಗೊಳಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಕಾರ್ಯಪಡೆ ವರದಿ ಸೆಮಿಸ್ಟರ್‌ ಪದ್ಧತಿ ಹಾಗೂ ಶ್ರೇಣಿ ಪದ್ಧತಿಯನ್ನು ಸಮರ್ಥಿಸಿದ್ದು , ಏಕರೂಪದ ಪಠ್ಯಕ್ರಮವನ್ನು ವಿರೋಧಿಸಿದೆ. ಉತ್ತಮ ಪಠ್ಯಕ್ರಮವನ್ನು ಆಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿರಬೇಕು ಎಂದೂ ಸಮಿತಿ ಹೇಳಿದೆ.

ಪದವಿಯ ಮೊದಲೆರಡು ವರ್ಷಗಳಲ್ಲಿ ಆಂತರಿಕ ಪರೀಕ್ಷೆಗಳು ಸಾಕು. ಕೊನೆಯ ವರ್ಷದಲ್ಲಿ ವಿಶ್ವವಿದ್ಯಾಲಯದ ಪರೀಕ್ಷೆಗಳು ಇದ್ದರೆ ಸಾಕು ಎಂದಿರುವ ಕಾರ್ಯಪಡೆ ವರದಿ- ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳಿರುವುದಾಗಿ ಹೇಳಿದೆ. ದೈಹಿಕ ಅಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿ ವೇತನ ನೀಡಬೇಕು ಎಂದೂ ವರದಿ ಹೇಳಿದೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X