ಭಾರತದಿ ಕಮ್ಮಿಯಾಗದ ಮಕ್ಕಳ ಸಾವಿನಪ್ರಮಾಣ, ಸುಧಾರಿಸದ ಶಿಕ್ಷಣ
ಭಾರತದಿ ಕಮ್ಮಿಯಾಗದ ಮಕ್ಕಳ ಸಾವಿನಪ್ರಮಾಣ, ಸುಧಾರಿಸದ ಶಿಕ್ಷಣ
ವಿಶ್ವ ಬ್ಯಾಂಕ್‌ನ ವರದಿ ಬಿಚ್ಚಿಟ್ಟ ರಾಷ್ಟ್ರದ ಕಳೆದೆರಡು ದಶಕಗಳ ಕತೆ
ಶಿಕ್ಷಣ ಹಾಗೂ ಮಕ್ಕಳ ಸಾವಿನ ಪ್ರಮಾಣ ತಗ್ಗಿಸುವಲ್ಲಿ ಭಾರೀ ಪ್ರಯತ್ನಗಳು ಭಾರತದಲ್ಲಿ ನಡೆದಿರುವುದು ನಿಜ. ಈ ನಿಟ್ಟಿನಲ್ಲಿ ಕೊಂಚ ಪ್ರಗತಿಯೂ ಸಾಧ್ಯವಾಗಿದೆ. ಆದರೆ, ವಿಶ್ವದ ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿನ ಮಕ್ಕಳಿಗೆ ಕಳೆದ ಎರಡು ದಶಕಗಳಲ್ಲಿ ವ್ಯವಸ್ಥಿತವಾದ ಪ್ರಾಥಮಿಕ ಶಿಕ್ಷಣ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಗತಿ ನಿಧಾನವಾಗಿದೆ. ಮಕ್ಕಳ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ವರದಿಯನ್ನು ಬಿಡುಗಡೆ ಮಾಡಿದ ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಇದು ಕಟು ಸತ್ಯ. ಆಡಳಿತಾತ್ಮಕ ವ್ಯವಸ್ಥೆ, ಸರಕಾರಗಳ ಕಾರ್ಯತಂತ್ರ, ಯೋಜನೆಗಳ ವೈಪಲ್ಯ ಇದಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.
ಪಂಚಾಯತ್ ಮತ್ತು ಗ್ರಾಮೀಣ ಮಟ್ಟದಲ್ಲಿ ಮಕ್ಕಳಿಗೆ ಆರೋಗ್ಯ, ಪೋಷಣೆ, ಶಿಕ್ಷಣ, ಇವೆಲ್ಲವನ್ನು ಪೋಷಕರು ಹಾಗೂ ತಾಯ ಂದಿರು ಕಲ್ಪಿಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಕಾರ್ಯಕ್ರಮಗಳು ಪೂರಕವಾಗಲಿವೆ ಎಂದು ಸಚಿವ ಅರ್ಜುನ್ ಸಿಂಗ್ ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications