ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪಟ್ಟಿಯಲ್ಲಿ ಜನಸಂಖ್ಯೆಸ್ಫೋಟ, ಸಾರ್ವಕರ್‌, ಕಳಂಕಿತ ಸಚಿವರು

By Staff
|
Google Oneindia Kannada News

ಬಿಜೆಪಿ ಪಟ್ಟಿಯಲ್ಲಿ ಜನಸಂಖ್ಯೆಸ್ಫೋಟ, ಸಾರ್ವಕರ್‌, ಕಳಂಕಿತ ಸಚಿವರು
ಸುಷ್ಮಾ ನೇತೃತ್ವದಲ್ಲಿ ಸೆ.21ರಂದು ಪೋರ್ಟ್‌ಬ್ಲೇರ್‌ನಲ್ಲಿ ಸತ್ಯಾಗ್ರಹ

ಬೆಂಗಳೂರು : ತಿರಂಗ ಯಾತ್ರೆಯ ಮೂಲಕ ಜನತೆಯಲ್ಲಿ ಧ್ವಜ ಜಾಗೃತಿ ಉಂಟು ಮಾಡಲು ಮುಂದಾಗಿರುವ ಬಿಜೆಪಿಯ ಗಮನ ಜನಸಂಖ್ಯಾ ಸ್ಫೋಟದತ್ತಲೂ ಹೊರಳಿದೆ.

ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವ ಆಂದೋಲನವನ್ನು ಬಿಜೆಪಿ ಸದ್ಯದಲ್ಲಿಯೇ ಹಮ್ಮಿಕೊಳ್ಳಲಿದೆ. ಇದೊಂದು ಗಂಭೀರ ವಿಷಯವಾಗಿದ್ದು , ಈ ಕುರಿತು ಇಂದು (ಸೆ.9, ಬುಧವಾರ) ಬೆಂಗಳೂರಿನಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆ ಚರ್ಚಿಸಿತು ಎಂದು ಬಿಜೆಪಿ ವಕ್ತಾರ ಮುಖ್ತರ್‌ ಅಬ್ಬಾಸ್‌ ನಕ್ವಿ ಸುದ್ದಿಗಾರರಿಗೆ ತಿಳಿಸಿದರು.

ಜನಸಂಖ್ಯಾ ಬೆಳವಣಿಗೆ ರಾಷ್ಟ್ರೀಯ ಸಮಸ್ಯೆ. ಇದನ್ನು ಹಿಂದು-ಮುಸ್ಲಿಂ ಸಮಸ್ಯೆ ಎಂದು ಬಿಂಬಿಸಬಾರದು. ಪ್ರತಿಯಾಂದನ್ನೂ ಕೋಮು ವಿಷಯವನ್ನಾಗಿ ನೋಡಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಹೇಳಿದರು.

ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರತಿಯಾಬ್ಬರಿಗೂ ಸಮಾನವಾದ ಕಾನೂನು ಜಾರಿಗೊಳಿಸಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಅನಿವಾರ್ಯ ಎಂದು ಸುಷ್ಮಾ ಹೇಳಿದರು.

ಪೋರ್ಟ್‌ಬ್ಲೇರ್‌ನಲ್ಲಿ ಸತ್ಯಾಗ್ರಹ : ಕೇಂದ್ರ ಸರ್ಕಾರ ವೀರ ಸಾವರ್ಕರ್‌ರನ್ನು ಅವಮಾನಿಸಿರುವುದನ್ನು ಪ್ರತಿಭಟಿಸಿ ಅಂಡಮಾನ್‌ ದ್ವೀಪಗಳಲ್ಲಿನ ಪೋರ್ಟ್‌ಬ್ಲೇರ್‌ನಲ್ಲಿ ಬಿಜೆಪಿ ಸೆ.21ರಂದು ಸತ್ಯಾಗ್ರಹ ನಡೆಸಲಿದೆ. ಈ ಸತ್ಯಾಗ್ರಹದಲ್ಲಿ ಬಿಜೆಪಿಯ ಸಂಸದರು ಹಾಗೂ ಶಾಸಕರು ಭಾಗವಹಿಸುವರು. ಪ್ರತಿಭಟನೆಯ ನೇತೃತ್ವವನ್ನು ಸುಷ್ಮಾ ಸ್ವರಾಜ್‌ ವಹಿಸುವ ಸಾಧ್ಯತೆಯಿದೆ ಎಂದು ಬಿಜೆಪಿ ವಕ್ತಾರ ಅರುಣ್‌ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರದಲ್ಲಿನ ಕಳಂಕಿಂತ ಸಚಿವರ ವಿರುದ್ಧವೂ ಬಿಜೆಪಿ ಹೋರಾಟ ಮುಂದುವರಿಯಲಿದೆ. ಕಳಂಕಿತ ಸಚಿವರನ್ನು ಕೈಬಿಡುವಂತೆ ಸೆ.21ರಿಂದ 25ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆಯನ್ನು ಆಯೋಜಿಸಲಿದೆ ಎಂದು ಜೇಟ್ಲಿ ಹೇಳಿದರು.

(ಪಿಟಿಐ))

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X