ಗಣೇಶ ಬರುತ್ತಿದ್ದಾನೆ, ಹುಷಾರಾಗಿರಿ ! ಪೊಲೀಸ್‌ಗೆ ಧರ್ಮ್ ತಾಕೀತು
ಗಣೇಶ ಬರುತ್ತಿದ್ದಾನೆ, ಹುಷಾರಾಗಿರಿ ! ಪೊಲೀಸ್‌ಗೆ ಧರ್ಮ್ ತಾಕೀತು
ನಕ್ಸಲೀಯರಿಗೆ ಮೂಗುದಾರ ಹಾಕಲು ಮೂತನ ಕಾರ್ಯತಂತ್ರ
ಬುಧವಾರ ನಡೆದ ಉನ್ನತಮಟ್ಟದ ಗೃಹ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದ ಅವರು, ಕೋಮು ಸಂಘರ್ಷಗಳ ತಪ್ಪಿಸಲು ಅಗತ್ಯ ಕ್ರಮಗಳ ಬಗೆಗೆ ಚರ್ಚಿಸಿದರು. ರಾಜ್ಯದಲ್ಲಿ ಬೆಳಗಾವಿ ಹಾಗೂ ಯಡಿಯೂರಿನಲ್ಲಿ ನಡೆದಂಥ ಅಹಿತಕರ ಘಟನೆಗಳು
ಮತ್ತೆ ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಿದರು.
ಸೂಕ್ಷ್ಮ ಪ್ರದೇಶಗಳತ್ತ ಪೋಲೀಸರು ಹದ್ದಿನ ಕಣ್ಣಿನಿಂದ ಗಮನಿಸಬೇಕಾಗಿದೆ. ಸಮಾಜ ವಿದ್ರೋಹಿಗಳ ನಿಯಂತ್ರಣಕ್ಕೆ ಶ್ರಮಿಸಬೇಕು. ಮುಂದಿನ ತಿಂಗಳು ಗಣೇಶನ ಹಬ್ಬವಿದ್ದು ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತೆ ವಹಿಸಲು ಮುಖ್ಯಮಂತ್ರಿ ಸೂಚಿಸಿದರು.
ಮಲೆನಾಡಿನ ಚಿಕ್ಕಮಗಳೂರು ಮತ್ತಿತರ ಪ್ರದೇಶಗಳಲ್ಲಿ ನಕ್ಸಲೀಯರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾರ್ಯತಂತ್ರ ಅನುಸರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳಾದ ದತ್, ವಿಜಯ್ ಗೋರೆ, ಡಿಜಿಪಿ ಎಸ್.ಎನ್.ಬೋರ್ಕರ್, ಹೆಚ್ಚುವರಿ ಡಿಜಿಪಿ ಟಿ.ಸುಭಾಷ್ ಭರಣಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ