ಸಿದ್ಧರಾಮಯ್ಯ ಸ್ಥಾನಕ್ಕೆ ಎನ್. ತಿಪ್ಪಣ್ಣ : ಹಳೆಬೇರಿಗೆ ಜೆಡಿಎಸ್ ಸಾರಥ್ಯ
ಸಿದ್ಧರಾಮಯ್ಯ ಸ್ಥಾನಕ್ಕೆ ಎನ್. ತಿಪ್ಪಣ್ಣ : ಹಳೆಬೇರಿಗೆ ಜೆಡಿಎಸ್ ಸಾರಥ್ಯ
ಲಿಂಗಾಯತ ಸಮುದಾಯದ ಮತಗಳ ಸೆಳೆಯಲು ದೇವೇಗೌಡರ ತಂತ್ರ
ಪಕ್ಷದ ರಾಜ್ಯಾಧ್ಯಕ್ಷರಾಗಿ ಎನ್.ತಿಪ್ಪಣ್ಣ ಅವರ ನೇಮಕದ ಆದೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬುಧವಾರ ಆದೇಶ ಹೊರಡಿಸಿದ್ದಾರೆ. ಇಲ್ಲಿಯವರೆಗೂ ಪಕ್ಷದ ಅಧ್ಯಕ್ಷರಾಗಿದ್ದ ಸಿದ್ಧರಾಮಯ್ಯ ಈಗ ಉಪಮುಖ್ಯಮಂತ್ರಿ ಸ್ಥಾನದೊಂದಿಗೆ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಕಾರಣ ಮತ್ತೊಬ್ಬರನ್ನು ಆ ಹುದ್ದೆಗೆ ತರುವುದು ಅನಿವಾರ್ಯವಾಗಿತ್ತ್ತು.
ತಿಪ್ಪಣ್ಣ ಬಳ್ಳಾರಿ ಜಿಲ್ಲೆಯವರಾಗಿದ್ದು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆ ಕಾರಣ ದೇವೇಗೌಡರು ಲಿಂಗಾಯಿತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ತಿಪ್ಪಣ್ಣನವರ ಕೈಗೆ ಪಕ್ಷದ ಸೂತ್ರಗಳನ್ನು ನೀಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಹಿನ್ನೆಲೆ: ಚಿತ್ರದುರ್ಗ ಜಿಲ್ಲೆಯ ತುರವನೂರು ಗ್ರಾಮದ ತಿಪ್ಪಣ್ಣ ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷರು. ವೃತ್ತಿಯಲ್ಲಿ ವಕೀಲರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ತಿಪ್ಪಣ್ಣ ಕಳೆದ ಚುನಾವಣೆ ಸಮಯದಲ್ಲಿ ತಮ್ಮ ಅಧ್ಯಕ್ಷತೆಯ ಸಂಯುಕ್ತ ಜನತಾದಳವನ್ನು ಜಾತ್ಯತೀತ ದಳದಲ್ಲಿ ವಿಲೀನಗೊಳಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications