ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ನೀತಿ ವಿರೋಧಿಸಿ ಇಂದು ನಿಂತಲ್ಲೇ ಖಾಸಗಿ ಬಸ್ಸುಗಳಿಗೆ ನಿದ್ರೆ

By Staff
|
Google Oneindia Kannada News

ಸರ್ಕಾರದ ನೀತಿ ವಿರೋಧಿಸಿ ಇಂದು ನಿಂತಲ್ಲೇ ಖಾಸಗಿ ಬಸ್ಸುಗಳಿಗೆ ನಿದ್ರೆ
ಆಗಸ್ಟ್‌ 16ರಿಂದ ಖಾಸಗಿ ಬಸ್‌ ದರ ಏರಿಕೆ

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ರಾಜ್ಯಾದ್ಯಂತ ಖಾಸಗಿ ಬಸ್‌ ಮಾಲೀಕರು ಇಂದು (ಆ.10) ಮುಷ್ಕರ ನಡೆಸುತ್ತಿದ್ದಾರೆ. ಸರಕಾರದ ಗಮನಸೆಳೆಯಲು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಲು ರಾಜ್ಯ ಖಾಸಗಿ ಬಸ್‌ ಮಾಲೀಕರ ಸಂಘ ನಿರ್ಧರಿಸಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಗಳಿಂದ ಬಸ್‌ ಮಾಲೀಕರು ಪ್ರಸ್ತುತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಡೀಸೆಲ್‌, ವಿಮಾ ಪಾಲಿಸಿ ಹಾಗೂ ವಾಹನಗಳ ಬಿಡಿಭಾಗಗಳ ದರ ಹೆಚ್ಚುತ್ತಿದೆ. ಸರಕಾರ ಬಸ್‌ ಮಾಲೀಕರ ಸಮಸ್ಯೆಗಳತ್ತ ಗಮನ ಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಮುಷ್ಕರವನ್ನು ತೀವ್ರಗೊಳಿಸುವುದಾಗಿ ಸಂಘ ಎಚ್ಚರಿಸಿದೆ.

ಖಾಸಗಿ ಬಸ್‌ಗಳ ಮುಷ್ಕರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ವಿಶೇಷವಾಗಿ ತೊಂದರೆಯಾಗಲಿದೆ.

ದರ ಹೆಚ್ಚಳ : ಡೀಸೆಲ್‌ ಮತ್ತಿತರ ದರ ಹೆಚ್ಚಳದಿಂದಾಗಿ ಆ.16 ರಿಂದ ಖಾಸಗಿ ಬಸ್‌ ಪ್ರಯಾಣ ದರ ಹೆಚ್ಚಾಗಲಿದೆ. ಆದರೆ ಇದು ಸರಕಾರಿ ಬಸ್‌ ದರಕ್ಕಿಂಥ ಕಡಿಮೆಯಿರಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X