ನಿರುದ್ಯೋಗ ಭತ್ಯೆಕೊಡಿ! ಸದನದಿ ಗದ್ದಲವೆಬ್ಬಿಸಿದ ಇಬ್ಬರು ಯುವಕರು
ನಿರುದ್ಯೋಗ ಭತ್ಯೆಕೊಡಿ! ಸದನದಿ ಗದ್ದಲವೆಬ್ಬಿಸಿದ ಇಬ್ಬರು ಯುವಕರು
ಅನಿರೀಕ್ಷಿತ ಘಟನೆಗೆ ಸಾಕ್ಷಿಯಾದ ವಿಧಾನಸಭೆ
ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಮರೆತಿದ್ದ ಕಾಂಗ್ರೆಸ್ ನಾಯಕರಿಗೆ ನಿರುದ್ಯೋಗ ಭತ್ಯೆಯ ವಿಷಯವನ್ನು ಜು.21ರ ಬುಧವಾರ ವಿಧಾನಸಭೆಯಲ್ಲಿ ನೆನಪು ಮಾಡಿಕೊಡಲಾಯಿತು. ನೆನಪಿಸಿದವರು ಪ್ರತಿಪಕ್ಷಗಳ ಸದಸ್ಯರಲ್ಲ ; ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವಕರು !
ನಿರುದ್ಯೋಗಿ ಯುವ ಜನತೆಗೆ 500 ರುಪಾಯಿ ಮಾಸಿಕ ಭತ್ಯೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಇಬ್ಬರು ಯುವಕರು ಘೋಷಣೆ ಕೂಗಿದರು. ಈ ಕುರಿತ ಕರಪತ್ರಗಳನ್ನೂ ಎಸೆದರು. ತಕ್ಷಣ ಧಾವಿಸಿದ ರಕ್ಷಣಾ ಸಿಬ್ಬಂದಿ ಇಬ್ಬರು ಯುವಕರನ್ನೂ ಸದನದಿಂದ ಹೊತ್ತೊಯ್ದಿತು.
ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ವಿದ್ಯಾವಂತ ಯುವ ಜನತೆಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ವಾಗ್ದಾನ ಮಾಡಿತ್ತು . ಆದರೆ ಮೊನ್ನೆ , ಜುಲೈ 19ರಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ನಿರುದ್ಯೋಗ ಭತ್ಯೆ ಪ್ರಸ್ತಾಪವೇ ಇಲ್ಲ ? ಮಾತು ತಪ್ಪಿದಿರಾ ಪೂಜಾರಿ? ಇದೇನಾ ಧರ್ಮ ಸಿಂಗ್ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications