ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತರ ಪ್ರಶ್ನಾವಳಿಯ ಪೇಚಿಗೆ ಸಿಲುಕಿದ ಜಾರ್ಜ್‌ ಫರ್ನಾಂಡಿಸ್‌

By Staff
|
Google Oneindia Kannada News

ಪತ್ರಕರ್ತರ ಪ್ರಶ್ನಾವಳಿಯ ಪೇಚಿಗೆ ಸಿಲುಕಿದ ಜಾರ್ಜ್‌ ಫರ್ನಾಂಡಿಸ್‌
ಕೇಂದ್ರ ಸಂಯುಕ್ತ ಪ್ರಗತಿಪರ ರಂಗ ಸರಕಾರವು ನೂತನವಾಗಿ ರಚಿಸಿದ ಸೋನಿಯಾ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯ ಔಚಿತ್ಯವನ್ನು ಪ್ರಶ್ನಿಸಿದ ಜಾರ್ಜ್‌ ಫರ್ನಾಂಡಿಸ್‌

ಬೆಂಗಳೂರು: ಗುಜಾರಾತ್‌, ಅದೊಂದು ಬಹಳ ಹಿಂದಿನ ಅಧ್ಯಾಯ. ಅದನ್ನು ಮತ್ತೆ ಕೆದಕಬೇಡಿ. ಕೆದಕಿ ಜೀವಂತವಾಗಿ ಇಡಬೇಡಿ. ಜೀವಂತ ಇರಬೇಕಾದರೆ...ರಾಜೀವ್‌ ಗಾಂಧಿ...ಸಿಖ್‌ ಹತ್ಯೆ...ದೆಹಲಿ ಬಗ್ಗೆ ಮಾತಾಡಿ ಎಂದು ಪತ್ರಕರ್ತರ ಪ್ರಶ್ನೆಯಿಂದ ವಿಚಲಿತರಾದ ಎನ್‌ಡಿಎ ಸಂಚಾಲಕ ಜಾಜ್‌ ಫರ್ನಾಂಡಿಸ್‌ ಅಲವತ್ತು ಕೊಂಡರು.

ಗುಜರಾತ್‌ ಕುರಿತು ವಾಜಪೇಯಿ ಹೇಳಿಕೆಗೆ ನಿಮ್ಮ ನಿಲುವೇನು?, ಎನ್‌ಡಿಎ ಸೋಲಿಗೆ ಗುಜರಾತ್‌ ಕಾರಣವೇ?, ಬಿಜೆಪಿ ಮತ್ತು ಜೆಡಿಯು ಸಖ್ಯದಲ್ಲಿ ಬಿರುಕು ಬಿಟ್ಟಿೆದೆಯೇ? ಎಂಬ ಪತ್ರಕರ್ತರ ಪ್ರಶ್ನೆಗಳು ಅವರನ್ನು ತೀರ್ವ ಪೇಚಿಗೆ ಸಿಲುಕಿಸಿದವು.

ವಾಜಪೇಯಿಯನ್ನು ಬಿಜೆಪಿ ಮೂಲೆಗುಂಪು ಮಡುತ್ತಿಲ್ಲ. ಬಿಜೆಪಿ ಮುಂಬಯಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಿಂದುತ್ವ ವಿಚಾರ ಮೇಳೈಸಿರುವುದು ಅಂತಹ ಪ್ರಮುಖ ವಿಚಾರವಲ್ಲ. ಹೆಚ್ಚಿನ ವಿಚಾರಗಳಿಗೆ ಜುಲೈ 5 ರಂದು ನಡೆಯುವ ಎನ್‌ಡಿಎ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಉತ್ತರ ದೊರಕಲಿದೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.

ಸಂಯುಕ್ತ ಪ್ರಗತಿಪರ ರಂಗ ಸರಕಾರವು ರಚಿಸಿದ ಸೋನಿಯಾ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯ ಔಚಿತ್ಯವೇನಿದೆ. ಇದು ಸಂವಿಧನಾತ್ಮಕ ಪ್ರಮಾದ. ರಾಷ್ಟ್ರೀಯ ಕಾರ್ಯನೀತಿ ಮತ್ತು ಕಾರ್ಯಕ್ರಮ ಅನುಷ್ಠಾನ ವಿಭಾಗ ಇರುವುದು ಯಾಕೆ? ಎಂದು ಅವರು ಪ್ರಶ್ನಿಸಿದರು.

ಈಗಲೇ ವಿದೇಶಾಂಗ ಮಂತ್ರಿ ನಟವರ ಸಿಂಗ್‌ ತಮ್ಮ ವಿದೇಶಿ ಭೇಟಿಯ ವಿಚಾರವನ್ನು ಪ್ರಧಾನಿ ಜೊತೆ ಚರ್ಚಿಸುತ್ತಿಲ್ಲ ಎಂಬ ಆರೋಪವಿದೆ. ಇದನ್ನು ಖಾತರಿ ಪಡಿಸಿಕೊಳ್ಳಬೇಕು. ಇಂತಹ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದು ಸರಕಾರದ ದಕ್ಷತೆ ಮತ್ತು ಸ್ಥಿರತೆಯ ಪ್ರಶ್ನೆಯಾಗಿದೆ. ಇವೆಲ್ಲ ವಿಚಾರಗಳನ್ನು ಬಜೆಟ್‌ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯ ಮೊದಲು ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ಅವಧಿ ಮುನ್ನ ಚುನಾವಣೆ ಎದುರಿಸಿರುವುದು ನಮ್ಮ ತಪ್ಪು. ಆದರೆ ಇದು ಎನ್‌ಡಿಎ ಪಕ್ಷಗಳ ಸರ್ವ ಸಮ್ಮತ ಅಭಿಪ್ರಾಯವಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಅಸಾಧ್ಯದ ಮಾತು. ಅವು ಕಾಂಗ್ರೆಸ್‌ ಅಥಾವ ಬಿಜೆಪಿ ಜೊತೆಗಿರಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಾಕ್ಷ ಬಿ.ಸೋಮಶೇಖರ್‌ ಮುಂದಿನ ಚುನಾವಣೆಗಲ್ಲಿ ಜೆಡಿಯು ಕೇಂದ್ರದಲ್ಲಿ ಎನ್‌ಡಿಎ ಅಂಗ ಪಕ್ಷವಾಗಿರುತ್ತದೆ. ಅದರೆ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X