ಮಾನವ ರಹಿತ ಯದ್ಧ ಟ್ಯಾಂಕರ್‌ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು
ಮಾನವ ರಹಿತ ಯದ್ಧ ಟ್ಯಾಂಕರ್‌ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು
ಡಾ. ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಂದ ಮಾನವ ರಹಿತವಾದ ಮೊಟ್ಟ ಮೊದಲ ಯುದ್ಧ ಟ್ಯಾಂಕರ್.
ಈ ಯುದ್ಧ ಟ್ಯಾಂಕರ್‌ನ್ನು ಕಂಟ್ರೋಲ್ ರೂಂ(ನಿಯಂತ್ರಣ ಕೋಣೆ)ನಿಂದ ರೇಡಿಯೋ ತರಂಗದ ಸಂಕೇತಗಳನ್ನು ಬಳಸಿ ನಿಯಂತ್ರಿಸಬಹುದಾಗಿದೆ. ಇದು ಮಾನವ ರಹಿತವಾದ ಮೊಟ್ಟ ಮೊದಲ ಯುದ್ಧ ಟ್ಯಾಂಕರ್ ಆಗಿದೆ. ಇದರಲ್ಲಿ ಚಾಲಕನ ಕೆಲಸವನ್ನು ರಿಮೋಟ್ ಕಂಟ್ರೋಲ್ ಮಾಡುತ್ತದೆ. ಕಮಾಂಡರ್ ಕೊಡಬೇಕಾದ ನಿರ್ದೇಶನವನ್ನು ನಿಯಂತ್ರಣ ಕೋಣೆಯಿಂದಲೇ ನೀಡಬಹುದಾಗಿದೆ. ಇದರಿಂದ ಯುದ್ಧ ಭೂಮಿಯಲ್ಲಿ ಸಂಭವಿಸಬಹುದಾದ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ಮಾರ್ಗದರ್ಶಕರಾದ ಜಯರಾಂ ಸುದ್ದಿಗಾರರಿಗೆ ತಿಳಿಸಿದರು.
ರವಿ ನಾರಾಯಣ್, ಜಯರಾಂ ಮತ್ತು ಇತರ ಅಧ್ಯಾಪಕರ ಮಾರ್ಗದರ್ಶನದಲ್ಲಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಿ.ಎಸ್. ಸುಧಾಕರ್, ಟಿ. ಜಾರ್ಜ್ ಜಾನ್, ಎಸ್. ದೀಪಕ್ ಕುಮಾರ್ ಹಾಗೂ ಶ್ರೀನಿವಾಸ್ ಶೆಟ್ಟಿ ಅವರು ಈ ಟ್ಯಾಂಕರ್‌ನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಯುದ್ಧ ಟ್ಯಾಂಕರ್ ಎಲ್ಲರಿಗೂ ಒಂದು ಮಾದರಿಯಾಗಲಿದೆ. ಅಮೆರಿಕದ ಎಂ-1 ಯುದ್ಧ ಟ್ಯಾಂಕರ್‌ಗಿಂತ ಉನ್ನತ ತಂತ್ರಜ್ಞಾನವನ್ನು ಇದು ಹೊಂದಿದೆ. ಟ್ಯಾಂಕರ್‌ನ ಕ್ಯಾಮರಾ, ಗನ್‌ಗಳನ್ನು ಎಲ್ಲ ದಿಕ್ಕಿಗೂ ತಿರುಗಿಸಬಲ್ಲ ವ್ಯವಸ್ಥೆಯಿದೆ. ನಿಯಂತ್ರಣ ಕೋಣೆಯಿಂದಲೇ ಟಿವಿ ಪರದೆಯ ಮೂಲಕ ಟ್ಯಾಂಕರ್‌ನ ಚಲನವಲನಗಳನ್ನು ನೋಡಿ ನಿಯಂತ್ರಿಸಬಹುದಾಗಿದೆ.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications