ಸುಪ್ರೀಂಕೋಟ್‌ ಮುಖ್ಯ ನ್ಯಾಯಮೂರ್ತಿಯಾಗಿ ರಮೇಶ್‌ ಲಾಹೋಟಿ

ಸುಪ್ರೀಂಕೋಟ್‌ ಮುಖ್ಯ ನ್ಯಾಯಮೂರ್ತಿಯಾಗಿ ರಮೇಶ್‌ ಲಾಹೋಟಿ
ತಾಯಿಯೇ ದೇವರೆಂದರು ನ್ಯಾಯಮೂರ್ತಿ

ನವದೆಹಲಿ: ನ್ಯಾಯಮೂರ್ತಿ ರಮೇಶ್‌ ಚಂದ್ರ ಲಾಹೋಟಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಮಂಗಳವಾರ (ಜೂನ್‌ 1) ಪ್ರಮಾಣ ವಚನ ಸ್ವೀಕರಿಸಿದರು.

ನ್ಯಾಯಮೂರ್ತಿ ಲಾಹೋಟಿ ಅವರಿಗೆ ರಾಷ್ಟಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಅಧಿಕಾರ ಹಾಗೂ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಲಹೋಟಿ ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಎಸ್‌. ರಾಜೇಂದ್ರ ಬಾಬು, ಉಪ ರಾಷ್ಟ್ರಪತಿ ಶೆಖಾವತ್‌, ಪ್ರಧಾನಿ ಮನಮೋಹನ ಸಿಂಗ್‌ ಮತ್ತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಮಾಣವಚನ ಸ್ವೀಕರಿಸಿದ ತಕ್ಷಣ ನ್ಯಾಯಮೂರ್ತಿ ಲಾಹೋಟಿಯವರು, ಸುಮಾರು 200ಕ್ಕೂ ಹೆಚ್ಚಿನ ಗಣ್ಯರ ಸಮ್ಮುಖದಲ್ಲೇ ತಮ್ಮ ತಾಯಿಯವರ ಕಾಲಿಗೆರಗಿ ಆಶೀರ್ವಾದ ಪಡೆದರು. ನನ್ನೆಲ್ಲ ಉನ್ನತಿ, ಸಾಧನೆಯ ಹಿರಿಮೆಗಳೆಲ್ಲ ನನ್ನ ಮಾತಾಪಿತೃಗಳಿಗೇ ಸಲ್ಲಬೇಕು. ದೇವರು ತಂದೆ ತಾಯಿಯ ರೂಪದಲ್ಲೇ ಜನರನ್ನು ಹರಸುವುದು ಎಂದು ಲಾಹೋಟಿಯವರು ಭಾವೋದ್ವೇಗದಿಂದ ನುಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರ ಗಣ್ಯರ ಪೈಕಿ ಗೃಹ ಮಂತ್ರಿ ಶಿವರಾಜ್‌ ಪಾಟೀಲ್‌, ಮಾನವ ಸಂಪನ್ಮೂಲ ಇಲಾಖಾ ಮಂತ್ರಿ ಅರ್ಜುನ್‌ ಸಿಂಗ್‌, ಹಣಕಾಸು ಮಂತ್ರಿ ಪಿ. ಚಿದಂಬರಂ, ಕಾನೂನು ಮಂತ್ರಿ ಎಚ್‌. ಆರ್‌. ಭಾರದ್ವಜ್‌, ತೈಲ ಉತ್ಪನ್ನಗಳ ಮಂತ್ರಿ ಮಣಿ ಶಂಕರ್‌ ಅಯ್ಯರ್‌, ಮತ್ತು ಸಾಮಾಜಿಕ ನ್ಯಾಯ ಮಂತ್ರಿ ಮೇರ್‌ ಕುಮಾರ್‌ ಪ್ರಮುಖರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+