ಪಾಕ್‌ನೆಲದಲ್ಲಿ ವಿಜಯಪತಾಕೆ-2: ಭಾರತಕ್ಕೆ ಜೂ. ಏಷ್ಯಾಕಪ್ ಹಾಕಿ
ಪಾಕ್‌ನೆಲದಲ್ಲಿ ವಿಜಯಪತಾಕೆ-2: ಭಾರತಕ್ಕೆ ಜೂ. ಏಷ್ಯಾಕಪ್ ಹಾಕಿ
ತುಷಾರ್ ಖಾಂಡೇಕರ್ ಹ್ಯಾಟ್ರಿಕ್ ಗೋಲು, 5-2 ಅಂತರದ ಜಯ
ಕರ್ನಾಟಕದ ಸಂದೀಪ್ ಮೈಕಲ್ ನೇತೃತ್ವದ ಭಾರತ ಜೂನಿಯರ್ ಹಾಕಿ ತಂಡ ಪಾಕಿಸ್ತಾನವನ್ನು ಅವರ ಮಣ್ಣಿನಲ್ಲೇ ಮಣಿಸುವ ಮೂಲಕ ಏಷ್ಯಾಕಪ್ ಗೆದ್ದಿದೆ. ಕರಾಚಿಯಲ್ಲಿ ಏಪ್ರಿಲ್ 29ರ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 5-2 ಗೋಲುಗಳಿಂದ ಪಾಕ್ ತಂಡವನ್ನು ಮಣಿಸಿತು.
ಈ ಅಂತಿಮ ಪಂದ್ಯದಲ್ಲಿ ಭರವಸೆಯ ಫಾರ್ವರ್ಡ್ ಆಟಗಾರ ತುಷಾರ್ ಖಾಂಡೇಕರ್ ಹ್ಯಾಟ್ರಿಕ್ ಗೋಲು ಗಳಿಸಿದರು. ಸರಣಿಯಲ್ಲಿ ಅತಿ ಹೆಚ್ಚಿನ ಗೋಲು ದಾಖಲಿಸಿದ ಗೌರವಕ್ಕೆ ಪಾತ್ರರಾದ ಸಂದೀಪ್ ಸಿಂಗ್ ಇನ್ನೆರಡು ಗೋಲು ದಾಖಲಿಸಿದರು.
ಪಂದ್ಯದ ಆರಂಭದಿಂದಲೇ ಪಾಕಿಸ್ತಾನದ ವಿರುದ್ಧ ಭಾರತ ಸ್ಪಷ್ಟ ಮುನ್ನಡೆ ಸಾಧಿಸಿತ್ತು. ಅಂತಿಮ ಹಂತದಲ್ಲಿ ಪಾಕ್ ಆಟಗಾರರು ತಿರುಗೇಟು ನೀಡಲು ಪ್ರಯತ್ನಿಸಿದ್ದರಾದರೂ ಕಾಲ ಮಿಂಚಿ ಹೋಗಿತ್ತು. ಇದು ಏಷ್ಯಾಕಪ್‌ನಲ್ಲಿ ಭಾರತದ ಚೊಚ್ಚಲ ವಿಜಯ ದುಂದುಭಿ.
ತಂಡದ ಯಶಸ್ಸಿನ ಸಂತಸದಲ್ಲಿ ತೇಲಾಡುತ್ತಿದ್ದ ಕೋಚ್ ಹರೇಂದ್ರ ಸಿಂಗ್ ಅವರು ಭಾರತದಲ್ಲಿ ಹಾಕಿಗೆ ಉತ್ತಮ ಭವಿಷ್ಯವಿದೆ ಎಂಬುದನ್ನು ನಮ್ಮ ಆಟಗಾರರು ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications