ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧ ಜಗತ್ತು !‘ಗಂಡಸರಿಗೇನು ಕಮ್ಮಿ’ ಎನ್ನುತ್ತಿದ್ದಾರೆ ಸ್ತ್ರೀಯರು !

By Staff
|
Google Oneindia Kannada News

ಅಪರಾಧ ಜಗತ್ತು !‘ಗಂಡಸರಿಗೇನು ಕಮ್ಮಿ’ ಎನ್ನುತ್ತಿದ್ದಾರೆ ಸ್ತ್ರೀಯರು !
ಮಹಿಳೆಯರಿಂದ ಸಂಭವಿಸುವ ಅಪರಾಧ ಕೃತ್ಯಗಳು ಹೆಚ್ಚುತ್ತಿವೆಯೇ ? ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ಪಟ್ಟಿ ಮಾಡಿರುವ ವಿವರಗಳನ್ನು ನೋಡಿದರೆ, ಇಲ್ಲವೆನ್ನುವುದು ಹೇಗೆ ?

ಇತ್ತೀಚೆಗೆ ಜನರ ಗಮನ ಸೆಳೆದ ಮೂರು ಪ್ರಕರಣಗಳು ಇಲ್ಲಿವೆ :

ಭಾರತಿ ಅರಸು : ಈಕೆ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಪುತ್ರಿ. ರಾಜಕಾರಣಿಯೂ ಹೌದು. ದೇವೇಗೌಡರ ಜಾತ್ಯತೀತ ಜನತಾದಳದ ಹುರಿಯಾಳು. ತನ್ನ ಸೋದರ ಸಂಬಂಧಿ ಚಿತ್ರಲೇಖ ಅರಸು ಕೊಲೆ ಆರೋಪ ಎದುರಿಸುತ್ತಿದ್ದಾಳೆ. ಚಿತ್ರಲೇಖಾ ಅರಸು ಅವರಿಂದ ಭಾರತಿ ಅರಸು ಪಡೆದ 65 ಲಕ್ಷ ರೂಪಾಯಿಯೇ ಈ ಕೊಲೆಗೆ ಕಾರಣವೆಂದು ನಂಬಲಾಗಿದೆ.

ಶುಭ : ಕಳೆದ ಡಿಸೆಂಬರ್‌ ತಿಂಗಳಲ್ಲಿ ತಾನು ಮದುವೆಯಾಗಬೇಕಿದ್ದ ಹುಡುಗನನ್ನೇ ಕೊಲ್ಲಿಸಿದ ಹುಡುಗಿ. ಈಕೆ ಬಿಎಮ್‌ಎಸ್‌ ಕಾನೂನು ಕಾಲೇಜಿನ ವಿದ್ಯಾರ್ಥಿನಿ. ಇದೇ ಕಾಲೇಜಿನ ತನ್ನ ಜೂನಿಯರ್‌ ಅರುಣ್‌ವರ್ಮನನ್ನು ಶುಭಾ ಪ್ರೀತಿಸುತ್ತಿದ್ದಳು. ಅದರೆ ಅದೊಂದು ದಿನ ತನ್ನ ಸಂಪ್ರದಾಯಸ್ಥ ಮನೆಯವರಿಗೆ ಈ ವಿಷಯ ತಿಳಿಯಿತು. ವಿಷಯ ಅರಿತ ಮನೆಯವರು ಆಕೆಗೆ ಮದುವೆ ಮಾಡಲು ನಿರ್ಧರಿಸಿದರು. 15 ವರ್ಷದಿಂದ ಬಲ್ಲ ಪಕ್ಕದ ಮನೆಯ ಹುಡುಗ, ಸಾಫ್ಟ್ಟ್‌ವೇರ್‌ ತಂತ್ರಜ್ಞ ಗಿರೀಶ್‌ ಜೊತೆ ಏಪ್ರಿಲ್‌ನಲ್ಲಿ ಆಕೆಯ ಮದುವೆ ಮಾಡಿಸಲು ಹಿರಿಯರೆಲ್ಲ ಸೇರಿ ನಿಶ್ಚಯಿಸಿದರು. ನಿಶ್ಚಿತಾರ್ಥವೂ ಆಗಿತ್ತು .

ಮದುವೆಗೆ ಇನ್ನೂ 5 ತಿಂಗಳು ಬಾಕಿಯಿತ್ತು. ಕಳೆದ ಡಿಸೆಂಬರ್‌ 3ರ ಸಂಜೆ ಶುಭ ಹಾಗೂ ಗಿರೀಶ್‌ ವಾಕಿಂಗ್‌ ಹೋಗುತ್ತಿದ್ದಾಗ, ಅದ್ಯಾರೋ ಹಿಂದಿನಿಂದ ಬಂದು ಗಿರೀಶ್‌ಗೆ ಹೊಡೆದೇಬಿಟ್ಟರು. ಬಲವಾದ ಹೊಡೆತ ಬಿದ್ದ ಗಿರೀಶ್‌ನನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ದುರೂ ಆತ ಪ್ರಾಣಾಪಾಯದಿಂದ ಪಾರಾಗಲಿಲ್ಲ. ತನಿಖೆ ಮುಂದುವರಿದಂತೆ ಹೊಡೆದು ಕೊಂದವರು ಶುಭಾಳ ಪ್ರೇಮಿ ಅರುಣ್‌ನ ಸಂಬಂಧಿ ಮತ್ತು ಅವನ ಕಾರು ಚಾಲಕ ಎಂದು ತಿಳಿದು ಬಂದಿತು. ಸದ್ಯಕ್ಕಂತೂ ನಾಲ್ವರೂ ಜೈಲು ಸೇರಿದರು. ಆರೋಪಿ ಶುಭ ಬೇಲ್‌ ಕೇಳಿ ಅರ್ಜಿ ಸಲ್ಲಿಸಿದ್ದಾಳೆ.

ಪದ್ಮಾ ಗುತ್ತೇದಾರ್‌: ಪ್ರತಿಷ್ಠಿತ ಗುತ್ತೇದಾರ್‌ ಮನೆತನದ ಮದ್ಯದ ಗುತ್ತಿಗೆದಾರ ಅಶೋಕ್‌ ಗುತ್ತೇದಾರ್‌ನ ಧರ್ಮಪತ್ನಿ. ಆಕೆಯ ಪ್ರಿಯಕರ ವೈದ್ಯಕೀಯ ವಿದ್ಯಾರ್ಥಿ, ಸಂತೋಷ್‌. ಪ್ರಿಯಕರನ ಜೊತೆಗೂಡಿ ಪತಿಯ ಕೊಲ್ಲಿಸಿದ ಆರೋಪ ಈಕೆಯ ಮೇಲಿದೆ. ಆಕೆಗೆ ಸಂತೋಷ್‌ ಪರಿಚಯವಾದದ್ದೇ ಮದುವೆಯ ಬಳಿಕ. ಅಶೋಕ್‌ ತನ್ನ ವ್ಯವಹಾರದಲ್ಲಿ ಊರೂರು ಅಲೆಯುತ್ತಿದ್ದಾಗ ಇವರ ಸಂಬಂಧ ಬೆಳೆದಿದೆ.

ಮೇಲಿನ ಮೂರು ಕೊಲೆಗಳು ಉದಾಹರಣೆ ಮಾತ್ರ. ಇಂಥ ಪ್ರಕರಣಗಳು ಸಾಕಷ್ಟಿವೆ. ಈ ಪ್ರಕರಣಗಳಲ್ಲಿ ಸ್ತ್ರಿಯರದ್ದೇ ನಾಯಕ ಪಾತ್ರ.

ಪ್ರಸಿದ್ಧ ಮನಶಾಸ್ತ್ರಜ್ಞರೊಬ್ಬರ ಪ್ರಕಾರ ‘ಆಕ್ರಮಣಕಾರಿ ಅಪರಾಧ ಹೆಂಗಸರಿಗಿಂತ ಗಂಡಸರಲ್ಲಿ ಸಾಮಾನ್ಯ. ಅಪರಾಧ ಎಸಗುವ ಮಹಿಳೆಯರು ಅಸ್ವಸ್ಥತೆಯ ಹಿನ್ನಲೆಯವರೇ? ಸದಾ ಮಾನಸಿಕ ತೊಂದರೆ ಅನುಭವಿಸುವವರೆ? ಮೋಸಗಾರರಂತೆ ನಡೆದುಕೊಳ್ಳುತ್ತಾರೆ? ಅವರ ಮನೆಯ ಕ್ರಮ-ನಿಯಮಗಳನ್ನು ಉಲ್ಲಂಘಿಸುತ್ತಿರುತ್ತಾರೆಯೇ ? ಎನ್ನುವುದನ್ನು ಗಮನಿಸಬೇಕು. ಉತ್ತರ ಹೌದಾದರೆ, ಅವರ ವ್ಯಕ್ತಿತ್ವದಲ್ಲಿಯೇ ನಿಜವಾದ ಅಸ್ವಸ್ಥತೆಯಿದೆ.

ಅಪರಾಧಿ ಎಂದರೆ ಅಪರಾಧಿಯೇ. ಅಪರಾಧಕ್ಕೆ ಹೆಣ್ಣು-ಗಂಡು ಎಂದು ಭೇದವಿಲ್ಲ. ಇಬ್ಬರ ನಡುವೆ ಅಪರಾಧದಲ್ಲಿ ವ್ಯತ್ಯಾಸವಿಲ್ಲ. ಇದು ಮಾನಸಿಕ ಸಮತೋಲನದ ಪ್ರಶ್ನೆಯಷ್ಟೆ. ಹೆಚ್ಚಿನ ವರದಕ್ಷಿಣೆ ಪ್ರಕರಣಗಳಲ್ಲಿ ಅತ್ತೆ ಅಥಾವ ಅತ್ತಿಗೆ ಪಾತ್ರವೇ ಹಿರಿದು. ಅಪರಾಧಕ್ಕೆ ಲಿಂಗಭೇಧವಿಲ್ಲ ಎಂಬುದು ಜಂಟಿ ಪೊಲಿಸ್‌ ಆಯುಕ್ತ (ಅಪರಾಧ) ಅಲೋಕ್‌ ಮೋಹನ್‌ ಅಭಿಪ್ರಾಯ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X