ಕೊಲೆ ಪ್ರಕರಣದಿ ಮಾಜಿ ಮುಖ್ಯಮಂತ್ರಿದೇವರಾಜಅರಸು ಪುತ್ರಿ

ಕೊಲೆ ಪ್ರಕರಣದಿ ಮಾಜಿ ಮುಖ್ಯಮಂತ್ರಿದೇವರಾಜಅರಸು ಪುತ್ರಿ
ಚಿತ್ರಲೇಖಾ ಕೊಲೆ ಪ್ರಕರಣದಲ್ಲಿ ಜಾತ್ಯತೀತ ಜನತಾದಳದ ಭಾರತಿ ಅರಸು ಬಂಧನ

ಬೆಂಗಳೂರು : ಭಾರೀ ಕುತೂಹಲ ಮೂಡಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಪುತ್ರಿಯ ಅಪಹರಣದ ರಹಸ್ಯವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದು , ಅಪಹರಣಕ್ಕೊಳಗಾಗಿದ್ದಾರೆ ಎಂದು ಶಂಕಿಸಲಾಗಿದ್ದ ಚಿತ್ರಲೇಖಾ ಅವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಸುಮಾರು ಒಂದೂವರೆ ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ ಚಿತ್ರಲೇಖಾ ಅವರ ಶವ ಸಕಲೇಶಪುರದ ಶಿರಾಡಿ ಘಾಟ್‌ ಸಮೀಪ ಪತ್ತೆಯಾಗಿದೆ. ಚಿತ್ರಲೇಖಾ ಅವರು ನಿವೃತ್ತ ನ್ಯಾಯಮೂರ್ತಿ ಚಂದ್ರಕಾಂತ ರಾಜ ಅರಸ್‌ ಅವರ ಪುತ್ರಿ.

ಚಿತ್ರಲೇಖಾ ಅವರ ಕೊಲೆಯ ಸಂಬಂಧ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್‌ ಅವರ ಪುತ್ರಿ ಭಾರತಿ ಅರಸ್‌ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದೆ. ಭಾರತಿ ಅವರ ನಿರ್ದೇಶನದಂತೆಯೇ ಈ ಕೊಲೆ ನಡೆದಿದೆ. ಮಧುಕುಮಾರ್‌ ಹಾಗೂ ಚಂದ್ರಕಾಂತ್‌ ಎನ್ನುವವರು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರಲೇಖಾ ಅವರಿಂದ 65 ಲಕ್ಷ ರುಪಾಯಿಗಳನ್ನು ಭಾರತಿ ಅರಸ್‌ ಸಾಲವಾಗಿ ಪಡೆದಿದ್ದು , ಸಾಲ ತೀರಿಸುವ ಒತ್ತಡ ಹೆಚ್ಚಾದಾಗ ಕೊಲೆಯ ಸಂಚು ರೂಪಿಸಿದ್ದಾರೆ. ಜ.19ರಂದು ಬೆಂಗಳೂರಿನ ಪಾಮ್‌ಗ್ರೂಪ್‌ ಆವರಣದಲ್ಲೇ ಚಿತ್ರಲೇಖಾ ಅವರ ಕೊಲೆ ನಡೆದಿದ್ದು , ಆನಂತರ ಶವವನ್ನು ಶಿರಾಡಿ ಘಾಟ್‌ನಲ್ಲಿ ಎಸೆದಿದ್ದಾರೆ. ಕಿವಿಯ ಓಲೆಯಿಂದ ಶವದ ಗುರುತು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತಿ ಅರಸ್‌ ಮತ್ತು ಉಳಿದಿಬ್ಬರು ಆರೋಪಿಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು, ಆರೋಪಿಗಳ ದೂರವಾಣಿ ಸಂಭಾಷಣೆಯನ್ನು ಆಲಿಸುವ ಮೂಲಕ ಪ್ರಕರಣವನ್ನು ಬಯಲಿಗೆಳೆದಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಮರಿಸ್ವಾಮಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+