ಚಿಟ್ಟಾಣಿಗೆ ಜಾನಪದಶ್ರೀ, ಶ್ರೀನಿವಾಸರಿಗೆ ಕನಕಪುರಂದರ ಪ್ರಶಸ್ತಿ
ಚಿಟ್ಟಾಣಿಗೆ ಜಾನಪದಶ್ರೀ, ಶ್ರೀನಿವಾಸರಿಗೆ ಕನಕಪುರಂದರ ಪ್ರಶಸ್ತಿ
ನೃತ್ಯ ಕಲಾವಿದ ರಾಧಾಕೃಷ್ಣರಿಗೆ ಶಾಂತಲಾ ನಾಟ್ಯ ಪ್ರಶಸ್ತಿ
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕಲಾವಿದ ರಾಮಚಂದ್ರ ಹೆಗಡೆ ಚಿಟ್ಟಾಣಿ ಅವರಿಗೆ ಜಾನಪದ ಶ್ರೀ ಪ್ರಶಸ್ತಿ ದೊರೆತಿದೆ. ಹಿರಿಯ ವೀಣಾ ವಾದಕ ಎಂ.ಜೆ.ಶ್ರೀನಿವಾಸ ಅಯ್ಯಂಗಾರ್ ಅವರಿಗೆ ಕನಕ- ಪುರಂದರ ಹಾಗೂ ಹಿರಿಯ ನೃತ್ಯ ಕಲಾವಿದ ಸಿ.ರಾಧಾಕೃಷ್ಣ ಅವರಿಗೆ ಶಾಂತಲಾ ನಾಟ್ಯ ಪ್ರಶಸ್ತಿ ದೊರೆತಿದೆ.
ಪ್ರಶಸ್ತಿಯ ಆಯ್ಕೆಗಾಗಿ ವಸುಂಧರಾ ದೊರೆಸ್ವಾಮಿ, ಚೆನ್ನಣ್ಣ ವಾಲೀಕಾರ್ ಹಾಗೂ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಾಜ್ಯ ಸರ್ಕಾರ ನೇಮಿಸಿತ್ತು . 1 ಲಕ್ಷ ರುಪಾಯಿ ನಗದು, ಸ್ಮರಣ ಫಲಕ ಹಾಗೂ ಸನ್ಮಾನವನ್ನು ಪ್ರಶಸ್ತಿ ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications