ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕುಣಿತ- ಲಂಚದ ಆಮಿಷ ಊಟದ ಜೊತೆಗಿನ ಉಪ್ಪಿನಕಾಯಂತೆ’

By Staff
|
Google Oneindia Kannada News

‘ಕುಣಿತ- ಲಂಚದ ಆಮಿಷ ಊಟದ ಜೊತೆಗಿನ ಉಪ್ಪಿನಕಾಯಂತೆ’
ಸಚಿವ ಡಿಕೆಶಿಗೆ ವಿಶ್ವನಾಥ್‌ ಮಾತಿನ ಗುದ್ದು

ಬೆಂಗಳೂರು: ನಾಗಮಂಗಲದ ನಂಗನಾಚ್‌ ಹಾಗೂ ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ ಪ್ರಕರಣಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಚಿವ ಎಚ್‌.ವಿಶ್ವನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಬರೇ ಅನ್ನ ಸಾಂಬಾರು ತಿಂದರೆ ರುಚಿ ಇರುವುದಿಲ್ಲ. ಊಟದ ಜೊತೆಗೆ ಜತೆಗೆ ಉಪ್ಪಿನಕಾಯಿ, ಹಪ್ಪಳ ಇತ್ಯಾದಿ ಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ ವಿಶ್ವನಾಥ್‌- ಇಂತದ್ದನ್ನೆಲ್ಲ ನೋಡಿಕೊಳ್ಳಲು ನಮ್ಮ ಪೂಜಾರಿ ಇದ್ದಾರೆ ಎಂದರು. ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ನಾನು ಮುಖ್ಯಮಂತ್ರಿ ಕೃಷ್ಣ ಅವರನ್ನು ಆಹ್ವಾನಿಸುವುದಿಲ್ಲ. ಅವರಾಗಿ ಸ್ಪರ್ಧಿಸುವುದಾದರೆ ಸ್ವಾಗತ. ಸುಮ್ಮನಿರಲಾಗದ ಕೆಲವರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಹೇಳುತ್ತಾರೆ. ತಮ್ಮ ಕ್ಷೇತ್ರಕ್ಕೆ ಸ್ಪರ್ಧಿಸಲು ಮುಖ್ಯಮಂತ್ರಿ ಬರುವುದಿಲ್ಲ ಎಂದು ಚೆನ್ನಾಗಿ ಗೊತ್ತಿದ್ದವರು ಈ ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿ ಹಿಂದಿನಿಂದಲೂ ಮದ್ದೂರಿನಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಬೆಂಗಳೂರು ಅಭಿವೃದ್ಧಿಗೆ ಕಾರಣಕರ್ತರಾಗಿರುವುದರಿಂದ ಇಲ್ಲಿಯೂ ಸ್ಪರ್ಧಿಸಬಹುದು. ಬೇಕಿದ್ದರೆ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಅವರು ಹೇಳಿದರು. ಇತ್ತೀಚೆಗಷ್ಟೇ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಚಿವ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದರು.

ಪಕ್ಷಕ್ಕೆ ಬಂದಿರುವ ನಾಯಕರ ಬಗೆಗಿನ ಆಂತರಿಕ ಅಸಮಾಧಾನ ಶಮನಕ್ಕೆ ಕೃಷ್ಣರೇ ಸೂಕ್ತ ವ್ಯಕ್ತಿ. ಸಮನ್ವಯಗೊಳಿಸುವ ಉಸ್ತುವಾರಿ ಅವರು ವಹಿಸುವುದು ಒಳಿತು ಎಂದು ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಪ್ರಗತಿಪರ ಜನತಾದಳದ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಹೊಂದಿದ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್‌- ಕಾಂಗ್ರೆಸ್ಸನ್ನು ಪಕ್ಷವೆನ್ನುವ ಬದಲು ಒಂದು ಜನಾಂದೋಲನ ಎನ್ನುವುದು ಸೂಕ್ತ. ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X