ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಜಗೌ, ಸುಕ್ರಿ ಬೊಮ್ಮಗೌಡ, ಪೂರ್ಣಿಮಾಗೆ ಸಂದೇಶ ಪ್ರಶಸ್ತಿ

By Staff
|
Google Oneindia Kannada News

ದೇಜಗೌ, ಸುಕ್ರಿ ಬೊಮ್ಮಗೌಡ, ಪೂರ್ಣಿಮಾಗೆ ಸಂದೇಶ ಪ್ರಶಸ್ತಿ
ಎಂಟು ಮಂದಿಗೆ ಸಂದೇಶ ಗೌರವ, ಫೆ.24ರಂದು ಪ್ರಶಸ್ತಿ ಪ್ರದಾನ

ಮಂಗಳೂರು : ಮೈಸೂರು ವಿಶ್ವವಿದ್ಯಾಲದ ವಿಶ್ರಾಂತ ಉಪಕುಲಪತಿಗಳಾದ ದೇವೇಗೌಡ ಜವರೇಗೌಡ (ಕನ್ನಡ ಸಾಹಿತ್ಯ), ಚಲನಚಿತ್ರ ಸಾಹಿತಿ ಮತ್ತು ನಿರ್ದೇಶಕ ಆರ್‌.ಎನ್‌.ಜಯಗೋಪಾಲ್‌(ಸಿನೆಮಾ), ಡಾ. ಆರ್‌. ಪೂರ್ಣಿಮಾ, ಸಂಪಾದಕರು, ಉದಯವಾಣಿ ಬೆಂಗಳೂರು(ಪತ್ರಿಕೋದ್ಯಮ), ಜಾನಪದ ತಜ್ಞ ಪಾಲ್ತಾಡಿ ರಾಮಕೃಷ್ಣ ಆಚಾರ್‌(ತುಳು ಸಾಹಿತ್ಯ), ಹಾಡುವ ಹಾಲಕ್ಕಿ ಎಂದೇ ಖ್ಯಾತರಾದ ಸುಕ್ರಿ ಬೊಮ್ಮಗೌಡ ಅಂಕೋಲ(ಕಲೆ), ಸೇರಿದಂತೆ ವಿವಿಧ ಕ್ಷೇತ್ರದ ಎಂಟು ಮಂದಿೆ ಸಂದೇಶ್‌ ಪ್ರತಿಷ್ಠಾನದ ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀಡುವ ಪ್ರಸಕ್ತ ವರ್ಷದ ಸಂದೇಶ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಸಂದೇಶ್‌ ಪ್ರಶಸ್ತಿ-2004’ ಕ್ಕೆ ಆಯ್ಕೆಯಾದ ಇತರರಪ : ಜೆ.ಎಸ್‌.ಡಿಸಿಲ್ವ(ಕೊಂಕಣಿ ಸಾಹಿತ್ಯ), ಸಿಸಿ ಇಂಡಿಯಾದ ಜನಮನ ಕಾರ್ಯಕ್ರಮ(ಕೇಬಲ್‌ ಟಿ.ವಿ.- ಸಮೂಹ ಮಾಧ್ಯಮ ಶಿಕ್ಷಣ) ಮತ್ತು ಸೆಲಿನ್‌ ಡಿಸೋಜಾ(ಉತ್ತಮ ಶಿಕ್ಷಕಿ).

ರೆ. ಡಾ. ಲಿಯೋ ಡಿಸೋಜಾ, ಡಾ. ಶ್ರೀನಿವಾಸ್‌ ಹಾವನೂರ್‌ ಮತ್ತು ಜಬ್ಬರ್‌ ಸಾಮೊ ಇವರುಗಳು ಸಂದೇಶ ಪ್ರತಿಷ್ಠಾನದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತೀರ್ಪುಗಾರರಾಗಿ ಡಾ. ಬಿ.ಎ.ವಿವೇಕ್‌ ರೈ, ಪ್ರೊ.ಅಮೃತ ಸೋಮೇಶ್ವರ, ವಿಲಿಯಂ ಮಾಡ್ತಾ, ರಿಚರ್ಡ್‌ ಲೂಯಿಸ್‌ ಮತ್ತು ನಾ.ಡಿಸೋಜಾ ಸಹಕರಿಸಿದ್ದಾರೆ ಎಂದು ಪ್ರತಿಷ್ಠಾನದ ನಿರ್ದೇಶಕರಾದ ಡೆನಿಸ್‌ ಡಿಸೋಜ ತಿಳಿಸಿದ್ದಾರೆ.

ಹತ್ತು ಸಾವಿರ ರು. ನಗದು, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಸಂದೇಶ ಪ್ರಶಸ್ತಿ ಒಳಗೊಂಡಿದೆ. ವಿಶೇಶ ಪ್ರಶಸ್ತಿಯು ಐದು ಸಾವಿರ ರು. ನಗದು, ಫಲಕ, ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಫೆ.24 ರಂದು, ವಿಧಾನ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ , ಸಿಮಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X