ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ತನ್ನ ನೆಚ್ಚಿನ ದೇಶ -ಬ್ರಿಯಾನ್‌

By Staff
|
Google Oneindia Kannada News

ಭಾರತ ತನ್ನ ನೆಚ್ಚಿನ ದೇಶ -ಬ್ರಿಯಾನ್‌
ಬೆಂಗಳೂರಿನ ಅರಮನೆ ಆವರದಲ್ಲಿ ಹಾಡಿನ ಹೊಳೆ ಉಕ್ಕೇರಿದಾಗ....

‘ಎವ್ರಿ ಥಿಂಗ್‌ ಐ ಡು, ಐ ಡು ಇಟ್‌ ಫಾರ್‌ ಯು’ !

ದಾಖಲೆ ಮಾರಾಟದ ‘ರಾಬಿನ್‌ಹುಡ್‌’ ಚಿತ್ರದ ಈ ಗೀತೆ ಕೇಳಿ ಬಂದದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ . ಕೆನಡಿಯನ್‌ ಪಾಪ್‌ ಗಾಯಕ ಬ್ರಿಯಾನ್‌ ಆ್ಯಡಮ್ಸ್‌ ಈ ಹಾಡನ್ನು ಹಾಡಿದಾಗ ನೆರೆದಿದ್ದ 30,000ಕ್ಕೂ ಹೆಚ್ಚಿನ ಸಂಗೀತ ಪ್ರೇಮಿಗಳು ಮೈಯಲ್ಲಿ ಮಿಂಚಿನ ಸಂಚಾರ. ಕ್ರೀಡಾಂಗಣದ ತುಂಬ ಹುಚ್ಚು ಕುಣಿತ. ಫೆ.8, ಭಾನುವಾರ ರಾತ್ರಿ ಆರಮನೆ ಅಂಗಳದಲ್ಲಿ ರಾಕ್‌ ಸಂಗೀತದ ಅನಭಿಶಕ್ತ ದೊರೆಯ ಒಡ್ಡೋಲಗ.

bryan adamsನಗರಕ್ಕೆ ಎರಡನೇ ಬಾರಿ ಆಗಮಿಸಿರುವ ಬ್ರಿಯಾನ್‌ ‘18 ಟಿಲ್‌ ಐ ಡೈ ’, ‘ಸುಮ್ಮರ್‌ ಆಫ್‌ 69’, ‘ಓನ್ಲೀ ಲವ್‌’, ‘ಇಟ್‌ ಕಟ್ಸ್‌ ಲೈಕ್‌ ನೈಫ್‌ ’ ಇನ್ನಿತರ ಹಾಡುಗಳ ಮೂಲಕ ತಮ್ಮ ಭಕ್ತರ (!?) ದಾಹ ತಣಿಸಿದರು. ತಮ್ಮ ಸಂಗೀತ ದೈವದ ಜಾತ್ರೆಯ ಗಜಿ ಬಿಜಿ, ಕೆಲವರಿಗೆ ದೊರಕದ ಟಿಕೇಟು, ಉಸಿರುಗಟ್ಟಿದ ವಾತಾವರಣ- ಅವ್ಯವಸ್ಥೆಯ ಆಗರದ ನಡುವೆ ಆಂಧ್ರ, ಕೇರಳ, ತಮಿಳುನಾಡಿನಿಂದ ಬಂದಿದ್ದ ರಾಕ್‌ ಪ್ರೇಮಿಗಳಿಗಳಿಗೆ ನಿರಾಶೆಯಾದದ್ದೇ ಹಚ್ಚು. ಜನಸಾಗರದಲ್ಲಿ ಕೆಲವರಂತೂ ಮೂರ್ಛೆ ಹೋದರು. ಕೆಲವರು ಉನ್ಮತ್ತರಾದರು.

44ರ ಹರೆಯದ ಈ ಉತ್ಸಾಹಿಯ ಕಂಠವೇ ಅಂತಹುದು. ಕೆನಡಾದ ಕಿಂಗ್‌ಸ್ಟನ್‌ನ ಆ ಹಾಡು ಬೆಂಗಳೂರಿನ ಬೀದಿಯಲ್ಲಿ ಜಿನುಗುತ್ತದೆ. 10 ಬಾರಿ ಗ್ರಾಮಿ ಪ್ರಶಸ್ತಿ ಗಳಿಸಿದೆ. ಮೋಡಿಯ ಹಾಡಿಗೆ ಜನ ಹುಚ್ಚೆದ್ದು ಕುಣಿಯುತ್ತಾರೆ. ನಿನ್ನೆಯ ಸರದಿ ಬೆಂಗಳೂರಿನವರದು. ಆತ ‘ಭಾರತ ತನ್ನ ನೆಚ್ಚಿನ ದೇಶ’ ಎಂದಾಗ ಕೇಳಿ ಬಂದ ಉದ್ಗಾರಕ್ಕೆ ಮೇರೆಯೇ ಇಲ್ಲ. ಆತ ಉಚ್ಚರಿಸಿದ ಒಂದೊಂದು ಪದಗಳಿಗೂ ಕೂಗಾಟ . ತನ್ನ ಟ್ರೇಡ್‌ ಮಾರ್ಕ್‌ ಕಪ್ಪು ಟೀಶರ್ಟ್‌ ಹಾಗೂ ಜೀನ್ಸ್‌ ತೊಟ್ಟ ಬ್ರಿಯಾನ್‌ ಜೊತೆ ಹಾಡುವ ಸೌಭಾಗ್ಯ ಒದಗಿದ್ದು ರಾಮಯ್ಯ ಕಾಲೇಜಿನ ವಿದ್ಯಾರ್ಥಿನಿ ಮೇಘನಾಗೆ. ಆಕೆ ಮೇಘಗಳ ಮೇಲೆಯೇ ಸಂಚರಿಸುತಿದ್ದಂತೆ ಕಾಣುತ್ತಿತ್ತು .

1983ರಲ್ಲಿ ರಾಕ್‌ ಸಂಗೀತದ ಖ್ಯಾತಿಯ ಉತ್ತುಂಗಕ್ಕೇರಿದ ಬ್ರಿಯಾನ್‌ ಹಿಂತಿರುಗಿ ನೋಡಿಲ್ಲ. ಚಿತ್ರ ನಟನೆ, ಫೊಟೋಗ್ರಾಫಿ, ಪ್ರಾಣಿದಯಾ ಸಂಘಟನೆ, ಮಾನವೀಯ ಸಹಕಾರ ಇವರ ಆಸಕ್ತಿಯ ಇತರ ಕ್ಷೇತ್ರಗಳು. ಇತರ ವೇಳೆಯಲ್ಲಿ ಡ್ರಮ್ಮರ್‌ ಜಿಮ್ಮ್‌ ವಾಲೆನ್ಸ್‌ ಜೊತೆಗೂಡಿ ಸಂಗೀತ ಸಾಹಿತ್ಯ ರಚನೆ ಹಾಗೂ ಆದಕ್ಕೆ ಸಂಗೀತ ನೀಡುವ ಕಾರ್ಯದಲ್ಲಿ ಮಗ್ನ. ಆತನದು ಬಿಡುವಿಲ್ಲದ ಕಾರ್ಯ ವೈಖರಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X