ತ್ರಿವೇಣಿ ಸಿಂಗ್, ಸಂಜೋಗ್‌ಛತ್ರಿಗೆ ಜ.26ರಂದು ‘ಆಶೋಕ ಚಕ್ರ’
ತ್ರಿವೇಣಿ ಸಿಂಗ್, ಸಂಜೋಗ್‌ಛತ್ರಿಗೆ ಜ.26ರಂದು ‘ಆಶೋಕ ಚಕ್ರ’
ಗಣರಾಜ್ಯ ಉತ್ಸವದ ಕಂಪಿಗಾಗಿ ಕಾದಿರುವ ಕೆಂಪು ಕೋಟೆ
ಬರುವ ಜನವರಿ 26 ರಂದು ಆಚರಿಸುವ 54ನೇ ಗಣರಾಜ್ಯೋತ್ಸವಕ್ಕೆ ಭರದಿಂದ ಸಿದ್ಧತೆಗಳು ಸಾಗುತ್ತಿವೆ. ಅ ಕುರಿತು ಕೆಂಪು ಕೋಟೆಯತ್ತ ಒಂದು ಕಿರುನೋಟ...
ಜನವರಿ 26 ರಂದು ನಡೆಯುವ 54ನೇ ಗಣರಾಜ್ಯೋತ್ಸವದಲ್ಲಿ ಭಾರತೀಯ ಭೂಸೇನೆಯ ಲೆಪ್ಟಿನೆಂಟ್ ತ್ರಿವೇಣಿ ಸಿಂಗ್ ಮತ್ತು ವಿಶೇಷ ಅರೆಸೇನಾ ದಳದ ಸಂಜೋಗ್ ಛತ್ರಿ ಯವರಿಗೆ ಈ ವರ್ಷದ ಅಶೋಕ ಚಕ್ರ ಮರಣೋತ್ತರ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ರಕ್ಷಣಾ ಮಂತ್ರಾಲಯದ ವಕ್ತಾರರು ತಿಳಿಸಿದ್ದಾರೆ. ಇದು ದೇಶಸೇವೆಗಾಗಿ ರಕ್ಷಣಾ ಇಲಾಖೆಯಲ್ಲಿ ನೀಡಲಾಗುವ ಉನ್ನತ ಗೌರವ.
‘ಈ ವರ್ಷ ಜ.2 ರಂದು ಜಮ್ಮು ರೈಲ್ವೇ ನಿಲ್ದಾಣದ ಮೇಲೆ ಭಯೋತ್ಪದಕ ದಾಳಿ ನಡೆದಾಗ ಮುಖಾಮುಖಿಯಾಗಿ ಅವರನ್ನು ಎದುರಿಸಿ ಗುಂಡಿಟ್ಟ ಧೀರ ‘ತ್ರಿವೇಣಿಸಿಂಗ್’. ರೈಲ್ವೇ ನಿಲ್ದಾಣದಲ್ಲಿ ಅತಿ ವೇಗದ ಕಾರ್ಯಚರಣೆಯ ಮೂಲಕ ಆತ್ಮಹತ್ಯಾದಾಳಿಯನ್ನು ಮಣಿಸಿದ ನಮ್ಮ ಯುವ ಲೆಫ್ಟಿನೆಂಟ್ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಕಾರ್ಯಚರಣೆ ನಡೆಸಿದ ಪಡೆಯ ಕಮಾಂಡರ್ ರಾಜೀಂದ್ರ ಸಿಂಗ್ ಹೇಳಿದ್ದಾರೆ.
ಉಗ್ರಗಾಮಿಗಳು ದಾಳಿ ಆರಂಭಿಸಿದ ಕೇವಲ ಹತ್ತೇ ನಿಮಿಷದಲ್ಲಿ ಅಲ್ಲಿ ಗೆ ತೆರಳಿದ ಸಿಂಗ್ ನೇರ ಹಣಾಹಣಿಯಲ್ಲಿ ಒಬ್ಬ ಉಗ್ರಗಾಮಿಯನ್ನು ಕೊಂದು ಮಿಕ್ಕವರ ಮೇಲೆ ಗ್ರೇನೆಡ್ ಎಸೆದು ಹಿಮ್ಮೆಟ್ಟಿಸಿದರು. ಈ ಕಾಳಗದಲ್ಲಿ ತನ್ನ ಜೀವವ ಲೆಕ್ಕಿಸದೆ ದೇಶಕ್ಕಾಗಿ ಪ್ರಾಣ ತೆತ್ತ ರು ಎಂದು ಭೂಸೇನಾ ವಕ್ತಾರರು ತಿಳಿಸಿದರು. ‘ಛತ್ರಿ’ಯವರ ಪಾತ್ರವೂ ಮಹತ್ತರವಾದುದು.
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ.್ಯಕ್ಷ ಲೂಯಿಸ್ ಇಂಕ್ಯೊ ಲುಲ ಡ ಸಿಲ್ವ ಪಾಲ್ಗೊಳ್ಳಲಿರುವರು. ಐದು ದಿನದ ಭೇಟಿಗಾಗಿ ಭಾರತಕ್ಕೆ ಆಗಮಿಸಲಿರುವ ಬ್ರೆಜಿಲ್ ಅಧ್ಯಕ್ಷರು ಭಾರತೀಯ ಪ್ರಧಾನಿ ಜೊತೆ ದ್ವಿಪಕ್ಷೀಯ ಒಪ್ಪಂದ ಸೇರಿದಂತೆ, ರಾಷ್ಟ್ರಪತಿ ಮತ್ತು ವಿವಿಧ ಮಂತ್ರಾಲಯ ಸಚಿವರೊಂದಿಗೆ ಸ್ಥಳೀಯ ಹಾಗೂ ಅಂತರರಾಷ್ಟ್ರಿಯ ಬೆಳವಣಿಗೆ, ಪರಿಸರ, ವ್ಯಾಪಾರದ ಕುರಿತು ಮಾತುಕತೆ ನಡೆಸಲಿದ್ದಾರೆ. ಮುಂದೆ ಸಿಐಐ (CII), ಫಿಕ್ಕಿ (FICCI) ಒಕ್ಕೂಟಗಳು ಹಮ್ಮಿಕೊಂಡಿರುವ ಗೊಷ್ಠಿಯಲ್ಲಿ ಭಾಗವಹಿಸುವರು. ಈ ಭೇಟಿಯನ್ನು ‘ಜಿ-3 ’(ಭಾರತ-ಬ್ರೆಜಿಲ್-ದ.ಆಫ್ರಿಕಾ) ಎಂದೇ ಬಿಂಬಿಸಲಾಗಿದೆ.
54ನೇ ಗಣರಾಜ್ಯೋತ್ಸವದ ಪ್ರದರ್ಶನ ಪೆರೇಡಿನಲ್ಲಿ ಎಂದಿನ ಪ್ರದರ್ಶಿತ ಪಡೆಗಳ ಜೊತೆ ಅತಿ ವೇಗ ಚಾಲಿತ ವಿಂಡೀ-505, ಅಗ್ನಿ-2, ದೂರಗಾಮಿ ಕ್ಷಿಪಣಿ, ಆಧುನಿಕ ಲಘು ಹೆಲಿಕಾಪ್ಟರ್, ಇತರ ಹೊಸ ಸಂವಹನ ಮತ್ತು ತಂತ್ರಜ್ಞಾನ ಸಂಶೋಧನೆಗಳನ್ನು ಪ್ರದರ್ಶಿಸಲಾಗುವುದು. 6ರಕ್ಷಣಾ ಇಲಾಖೆಯ ಸ್ಥಬ್ದ ಚಿತ್ರಗಳು, 29 ಸಾಂಸ್ಕೃತಿಕ ಸ್ಥಬ್ದ ಚಿತ್ರಗಳು ಹಾಗೂ ಶಾಲಾ ಮಕ್ಕಳ ಭಾಗವಹಿಸುವಿಕೆ ಕಾರ್ಯಕ್ರಮದ ವಿಶೇಷಗಳು.
ಸರ್ವ ಗೌರವಗಳೊಂದಿಗೆ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಮರಣೋತ್ತರ ಅಶೋಕ ಚಕ್ರವನ್ನು ಪ್ರಧಾನ ಮಾಡಲಿರುವರು. ಇದೇ ಸಂದರ್ಭದಲ್ಲಿ ಇತರ ಸೇನಾ ಪುರಸ್ಕಾರಗಳನ್ನು ಪ್ರದಾನ ಮಾಡುವರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications