ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪಮೊಯಿಲಿ ಜೀವನಚರಿತ್ರೆಕೃತಿ ರಾಮಕೃಷ್ಣಹೆಗಡೆಗೆ ಅರ್ಪಣೆ

By Staff
|
Google Oneindia Kannada News

ವೀರಪ್ಪಮೊಯಿಲಿ ಜೀವನಚರಿತ್ರೆಕೃತಿ ರಾಮಕೃಷ್ಣಹೆಗಡೆಗೆ ಅರ್ಪಣೆ
ಮೊಯಿಲಿಯವರ ಜೀವನ ಹಾಗೂ ಸಾಧನೆಗಳ ಅಕ್ಷರ ರೂಪ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಲೇಖಕ ಎಂ.ವೀರಪ್ಪ ಮೊಯಿಲಿ ಅವರ ಜೀವನ ಚರಿತ್ರೆ ‘ವೇರ್‌ ದಿ ಮೈಂಡ್‌ ಇಸ್‌ ವಿದೌಟ್‌ ಫಿಯರ್‌’ (‘Where the Mind is Without Fear’) ಕೃತಿ ಸೋಮವಾರ (ಜ.12) ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಯಿತು.

ಮೊಯಿಲಿಯವರ ಜೀವನದ ಹಲವಾರು ಮುಖ್ಯ ಘಟನೆ ಹಾಗೂ ಸಾಧನೆಗಳನ್ನು ಈ ಕೃತಿ ಹಿಡಿದಿಟ್ಟಿದೆ. ಪೀಣ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಎಲೆಕ್ಟ್ರಾನಿಕ್‌ ಸಿಟಿ, ಪ್ರಿಯದರ್ಶಿನಿ ಸಿಲ್ಕ್ಸ್‌ , ಸಿಇಟಿ, ಕಿಯೋನಿಕ್ಸ್‌ ಮುಂತಾದ ಹಲವಾರು ಸಂಸ್ಥೆಗಳು ಮೊಯಿಲಿ ಅವರ ಸಾಧನೆಯ ಸಂಕೇತವಾಗಿವೆ ಎಂದು ಪುಸ್ತಕ ಕುರಿತು ಮಾತನಾಡಿದ ವಿಮರ್ಶಕ ಡಾ.ಎಸ್‌.ಎಲ್‌.ಶೇಷಗಿರಿ ರಾವ್‌ ಹೇಳಿದರು.

ಮುಖ್ಯಮಂತ್ರಿಯಾಗಿ ಮೊಯಿಲಿ ಅವರದ್ದು ಅಪಾರವಾದ ಜನಪರ ಕಾಳಜಿಯಾಗಿತ್ತು . ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹ ಕಾಣಿಸಿಕೊಂಡಿತು. ಅಧಿಕಾರ ಸ್ವೀಕಾರದ ಸಂತೋಷ-ಅಭಿನಂದನೆಗಳನ್ನು ಬದಿಗಿಟ್ಟು ಪ್ರವಾಹ ಪ್ರಕೋಪ ಪರಿಸ್ಥಿತಿಯ ಅವಲೋಕನಕ್ಕೆ ಮೊಯಿಲಿ ತೆರಳಿದ್ದರು. ಇದು ಅವರ ಜನಪರ ಕಾಳಜಿಗೆ ಸಾಕ್ಷಿ ಎಂದು ಶೇಷಗಿರಿರಾವ್‌ ಹೇಳಿದರು.

ಕಡಿಮೆ ಕಾಲಾವಕಾಶದಲ್ಲೇ ಮೊಯಿಲಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅವರೊಬ್ಬ ಅಪರೂಪದ ಆಡಳಿತಗಾರ ಎಂದೂ ಶೇಷಗಿರಿರಾವ್‌ ಬಣ್ಣಿಸಿದರು.

ಜೀವನ ಚರಿತ್ರೆ ಕೃತಿ ಸಂದರ್ಭದಲ್ಲಿ ಮಾತನಾಡಿದ ಮೊಯಿಲಿ- ಈ ಪುಸ್ತಕ ಕರ್ನಾಟಕ ಹಾಗೂ ರಾಜ್ಯದ ಬಡ ಜನತೆಗೆ ಸೇರಿದುದು ಎಂದರು. ಜ.12ರ ಸೋಮವಾರ ನಿಧನರಾದ ರಾಮಕೃಷ್ಣ ಹೆಗಡೆ ಅವರ ನಾಯಕತ್ವ ಗುಣವನ್ನು ಕೊಂಡಾಡಿದ ಮೊಯಿಲಿ- ತಮ್ಮ ಜೀವನ ಚರಿತ್ರೆಯನ್ನು ಅಗಲಿದ ನಾಯಕನಿಗೆ ಅರ್ಪಿಸುವುದಾಗಿ ಭಾವುಕರಾಗಿ ನುಡಿದರು.

ಡಾ. ಶಶಿಧರ್‌ ಮೂರ್ತಿ ಹಾಗೂ ಸಿ.ಪೌಲ್‌ ವರ್ಗೀಸ್‌ ಅವರು ಮೊಯಿಲಿ ಜೀವನ ಚರಿತ್ರೆಯ ಕರ್ತೃಗಳು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X