ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಬೀದಿಬೀದಿಗೂ ಬೆಳಕು ! ರಾಮಲಿಂಗಾರೆಡ್ಡಿ ಭರವಸೆ

By Staff
|
Google Oneindia Kannada News

ಬೆಂಗಳೂರಿನ ಬೀದಿಬೀದಿಗೂ ಬೆಳಕು ! ರಾಮಲಿಂಗಾರೆಡ್ಡಿ ಭರವಸೆ
ಮೊದಲು ಕುಡಿಯುವ ನೀರು, ಒಳ ಚರಂಡಿ- ಆನಂತರ ಬೆಳಕಿನ ಹೊನಲು

ಬೆಂಗಳೂರು : ನಿಮ್ಮ ಬಡಾವಣೆಯಲ್ಲಿನ ಬೀದಿ ದೀಪ ಬರ್ನಾಗಿ ತುಂಬಾ ದಿನಗಳಾದವಾ ? ಕ್ರಿಕೆಟ್ಟಿನ ಹುಡುಗರ ದಾಂಧಲೆಯಿಂದಾಗಿ ಕತ್ತಲು ತುಂಬಿಕೊಂಡ ಓಣಿಯನ್ನು ಕೇಳುವವರಿಲ್ಲವೆಂದು ಬೇಸರಿಸಿಕೊಂಡಿದ್ದೀರಾ ?

ಸ್ವಲ್ಪ ತಡೆಯಿರಿ. ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೆಂಗಳೂರಿನ ಬೀದಿಬೀದಿಯ ತುಂಬಾ ಬೆಳಕು ತುಂಬಲು ಸಿದ್ಧರಾಗುತ್ತಿದ್ದಾರೆ. ಎಲ್ಲವೂ ಅವರು ಅಂದುಕೊಂಡಂತೆ ಆದರೆ, ಓಣಿಯ ಕತ್ತಲ ರಾತ್ರಿಗಳು ಶೀಘ್ರದಲ್ಲೇ ಕೊನೆಯಾದರೂ ಆಗಬಹುದು !

ಸದ್ಯಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಆದ್ಯತೆಗಳು ಎರಡು. ಒಂದು ಕುಡಿಯುವ ನೀರಿನ ಸಮರ್ಪಕ ಪೂರೈಕೆ. ಮತ್ತೊಂದು ಒಳ ಚರಂಡಿ ವ್ಯವಸ್ಥೆ . 27 ಹೊಸ ವಾರ್ಡ್‌ಗಳನ್ನು ಡ್ರೆೃನೇಜ್‌ ಜಾಲಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಈ ಬಡಾವಣೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಪಾಲಿಕೆ ತೊಡಗಿದೆ. ಬೀದಿ ದೀಪಗಳದ್ದು ಆನಂತರದ ಪಾಳಿ ಎಂದು ನಗರಾಭಿವೃದ್ಧಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ನಗರದ ಯಾವ ಯಾವ ಪ್ರದೇಶಗಳಲ್ಲಿ ಬೀದಿದೀಪಗಳ ಕೊರತೆಯಿದೆ ಎನ್ನುವ ಸಮೀಕ್ಷೆಯನ್ನು ನಗರಪಾಲಿಕೆ ಪ್ರಸ್ತುತ ನಡೆಸುತ್ತಿದೆ. ವಿದ್ಯುತ್‌ ಕಂಬಗಳನ್ನು ನಿಲ್ಲಿಸುವ ಕೆಲಸವೂ ನಡೆಯುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಅಲ್ಲಿಯವರೆಗೂ ಕಾಯೋಣ !

(ಇನ್ಫೋ ವಾರ್ತೆ)

Post your views

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X