ಕಾಚಾಪುರ್, ಸಿಂಪಿ ಸೇರಿದಂತೆ 5 ಕಲಾವಿದರಿಗೆ ಚಿತ್ರಕಲೆ ಪ್ರಶಸ್ತಿ
ಕಾಚಾಪುರ್, ಸಿಂಪಿ ಸೇರಿದಂತೆ 5 ಕಲಾವಿದರಿಗೆ ಚಿತ್ರಕಲೆ ಪ್ರಶಸ್ತಿ
ಕರ್ನಾಟಕದ ಇನ್ನೂ ಐವರು ಕಲಾವಿದರಿಗೆ ನವದೆಹಲಿಯ ಐಫೆಕ್ಸ್ ಬಹುಮಾನ
ಗೌರವ ಪ್ರಸ್ತಿಯು 10 ಸಾವಿರ ರುಪಾಯಿ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ. ಇದೇ ವರ್ಷದ ಗೌರವ ಪುರಸ್ಕಾರಕ್ಕೆ ಬೆಂಗಳೂರಿನ ಕ.ರಾ.ಕೃಷ್ಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಪುರಸ್ಕಾರಕ್ಕೆ ನಗದು ಬಹುಮಾನ ಇರುವುದಿಲ್ಲ. 2004ರ ಫೆಬ್ರವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಐಫೆಕ್ಸ್ ಪ್ರಶಸ್ತಿ : ನವದೆಹಲಿಯ ಐಫೆಕ್ಸ್ ಸಂಸ್ಥೆ ರಾಜ್ಯದ ಏಳು ಕಲಾವಿದರನ್ನು ತಾನು ಕೊಡುವ ಪ್ರಶಸ್ತಿಗೆ ಆರಿಸಿದೆ. ಡಿಸೆಂಬರ್ 16ನೇ ತಾರೀಕು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತಲಾ 10 ಸಾವಿರ ರುಪಾಯಿ ಬಹುಮಾನವನ್ನು ಈ ಪ್ರಶಸ್ತಿ ಒಳಗೊಂಡಿದೆ.
ಐಫೆಕ್ಸ್ ಪ್ರಶಸ್ತಿಗೆ ಆಯ್ಕೆಯಾದವರು- ಗುಲ್ಬರ್ಗಾದ ಅಮೃತ ಎಂ. ಸಾಹು, ಮೈಸೂರಿನ ಸಿ. ಚಿಕ್ಕಣ್ಣ (ಚಿತ್ರಕಲೆ); ತುಮಕೂರಿನ ಕೆ.ಎಸ್.ಬಸವರಾಜು, ಬಿಜಾಪುರದ ಸಿ.ಕೆ.ಲಿಂಗರಾಜು (ಗ್ರಾಫಿಕ್ ಕಲೆ); ಮೈಸೂರಿನ ಶ್ರೀನಾಥ್ ಜಾದವ್, ಉಡುಪಿಯ ವಿಶ್ವೇಶ ಪರ್ಕಳ (ಸಮಕಾಲೀನ ಶಿಲ್ಪಕಲೆ); ಬೆಂಗಳೂರಿನ ಯು.ಅಶೋಕ್ (ಡ್ರಾಯಿಂಗ್).
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications