Get Updates
Get notified of breaking news, exclusive insights, and must-see stories!

ತಾನ್ಸಿ ಭೂ ಹಗರಣದಿಂದ ಮುಕ್ತಿ : ಜಯಲಲಿತಾಗೆ ಮತ್ತಷ್ಟು ಬಲ

ತಾನ್ಸಿ ಭೂ ಹಗರಣದಿಂದ ಮುಕ್ತಿ : ಜಯಲಲಿತಾಗೆ ಮತ್ತಷ್ಟು ಬಲ
ಜಯಲಲಿತಾ ನಿರ್ದೋಷಿಯೆಂದ ಸುಪ್ರಿಂಕೋರ್ಟ್‌

ನವದೆಹಲಿ : ರಾಜಕೀಯ ವಲಯಗಳಲ್ಲಿ ಅಪಾರ ಕುತೂಹಲ ಮೂಡಿಸಿದ್ದ ತಾನ್ಸಿ ಭೂ ಹಗರಣದಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಸುಪ್ರಿಂಕೋರ್ಟ್‌ ಆರೋಪಮುಕ್ತಗೊಳಿಸಿದೆ.

ನ್ಯಾಯಮೂರ್ತಿ ಎಸ್‌.ರಾಜೇಂದ್ರ ಬಾಬು ಹಾಗೂ ನ್ಯಾಯಮೂರ್ತಿ ಪಿ.ವಿ.ರೆಡ್ಡಿ ಅವರನ್ನೊಳಗೊಂಡ ನ್ಯಾಯಪೀಠ ತಾನ್ಸಿ ಹಗರಣದಲ್ಲಿ ಜಯಲಲಿತಾ ಅವರನ್ನು ಆರೋಪಮುಕ್ತಗೊಳಿಸುವ ತೀರ್ಪನ್ನು ಸೋಮವಾರ (ನ.24) ನೀಡಿತು. ಜನತಾಪಕ್ಷದ ಡಾ.ಸುಬ್ರಮಣ್ಯಂ ಸ್ವಾಮಿ ಹಾಗೂ ಆರ್‌.ಸಾಯಿ ಭಾರತಿ ಅವರು ತಾನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಜಯಲಲಿತಾ ಅವರನ್ನು ನಿರ್ದೋಷಿಯೆಂದು ಸಾರಿತು.

ಜಯಲಲಿತಾ ಅವರ ಮೇಲಿನ ಆರೋಪವನ್ನು ಸಮರ್ಥಿಸಲು ಯಾವುದೇ ಕಾನೂನು ಸಾಕ್ಷ್ಯಗಳು ಲಭ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ತಾನ್ಸಿ ಭೂ ಹಗರಣದಿಂದ ಆರೋಪ ಮುಕ್ತರಾಗುವ ಮೂಲಕ ಜಯಲಲಿತಾ ಮತ್ತೊಂದು ನ್ಯಾಯಾಂಗ ಯಶಸ್ಸು ಗಳಿಸಿದ್ದು, ಜಯಾ ವಿರೋಧಿಗಳು ಮತ್ತೊಮ್ಮೆ ಹಿನ್ನಡೆ ಅನುಭವಿಸಿದಂತಾಗಿದೆ. ಈಚಿನ ದಿನಗಳಲ್ಲಿ ಜಯಲಲಿತಾ ಅವರು ದಿಟ್ಟ ಕ್ರಮಗಳ ಮೂಲಕ ತಮಿಳುನಾಡಿನ ರಾಜಕಾರಣದಲ್ಲಿ ಏಕಸ್ವಾಮ್ಯತೆ ಗಳಿಸುತ್ತಿದ್ದು , ಪ್ರತಿಪಕ್ಷಗಳ ಧ್ವನಿ ಕ್ಷೀಣಿಸುತ್ತಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+