ನಕಲಿ ಛಾಪಾ ಕಾಗದಗಳ ಸರದಾರ ತೆಲಗಿಗೆ ಜೈಲಲ್ಲಿ ಏಡ್ಸ್‌ !

ನಕಲಿ ಛಾಪಾ ಕಾಗದಗಳ ಸರದಾರ ತೆಲಗಿಗೆ ಜೈಲಲ್ಲಿ ಏಡ್ಸ್‌ !
ತನಗೆ ಎಚ್‌ಐವಿ ಸೋಂಕು ತಗಲಿಸಿದವರ ಪತ್ತೆ ಮಾಡಲು ಸಿಬಿಐ ತನಿಖೆಗೆ ತೆಲಗಿ ಒತ್ತಾಯ

ಬೆಂಗಳೂರು : 33 ಸಾವಿರ ಕೋಟಿ ರುಪಾಯಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ ತೆಲಗಿಗೆ ಎಚ್‌ಐವಿ ಪಾಸಿಟಿವ್‌ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದ್ದು, ಇದಕ್ಕೆ ಪೊಲೀಸರು ಮತ್ತು ಸೆರೆಮನೆಯ ಸಿಬ್ಬಂದಿಯೇ ಕಾರಣ ಎಂದು ಆತ ದೂರಿದ್ದಾನೆ.

ತೆಲಗಿಯ ವಕೀಲ ಎಂ.ಟಿ. ನಾಣಯ್ಯ ಆಂಗ್ಲ ಪತ್ರಿಕೆಯಾಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಮಹತ್ವದ ವಿಷಯ ಹೇಳಿದ್ದಾರೆ. ತನಗೆ ಎಚ್‌ಐವಿ ಸೋಂಕು ತಗಲಿಸಿರುವ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಬೇಕು ಎಂದು ತೆಲಗಿ ಬಯಸಿರುವುದಾಗಿ ಹೇಳಿರುವ ವಕೀಲರು, ಸೆರೆಮನೆಯ ಸಿಬ್ಬಂದಿಯಿಂದ ಸಂಬಂಧಪಟ್ಟ ದಾಖಲೆಗಳು ಸಿಕ್ಕ ನಂತರ ಈ ಸಂಗತಿಯನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ವಕೀಲರು ಹೇಳುವಂತೆ-
ಕರೀಂ ಲಾಲ ಪೊಲೀಸ್‌ ವಶಕ್ಕೆ ಹೋಗುವ ಮುಂಚಿನ ವೈದ್ಯಕೀಯ ಪರೀಕ್ಷೆಯ ದಾಖನೆಗಳ ಪ್ರಕಾರ, ಎಚ್‌ಐವಿ ಸೋಂಕು ಇರಲಿಲ್ಲ. ಆದರೆ ಈಗ ಸೋಂಕು ತಗುಲಿರುವುಗು ಖುದ್ದು ತೆಲಗಿಗೆ ಗೊತ್ತಾಗಿದೆ. ವಿಚಾರಣೆ ಸಂದರ್ಭದಲ್ಲಿ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಈತನನ್ನು ಕರೆದೊಯ್ಯಲಾಗಿತ್ತು. ಮಧುಮೇಹ ಹಾಗೂ ಹೃದಯ ಸಂಬಂಧಿ ತೊಂದರೆಯಿರುವುದರಿಂದ ತೆಲಗಿಗೆ ಚುಚ್ಚುಮದ್ದು ಕೊಡುವುದು ಸಾಮಾನ್ಯ ಸಂಗತಿ. ಬಹುಶಃ ಹೀಗೆ ಮಾಡುವಾಗ ಯಾರೋ ಪಿತೂರಿ ಮಾಡಿ, ಎಚ್‌ಐವಿ ರೋಗಾಣುಗಳನ್ನು ತನ್ನ ದೇಹಕ್ಕೆ ಸೇರಿಸಿದ್ದಾರೆ ಎಂಬುದು ತೆಲಗಿ ಅನುಮಾನ.

ವೈದ್ಯಕೀಯ ದಾಖಲೆಗಳನ್ನು ಇಟ್ಟುಕೊಂಡು ಈ ವಿಷಯವಾಗಿ ಕರ್ನಾಟಕ ಹೈಕೋರ್ಟಿಗೆ ಹೋಗಲು ಸಿದ್ಧರಾಗುತ್ತಿದ್ದೇವೆ. ತೆಲಗಿ ಇಚ್ಛೆಯಂತೆ ಈ ಪ್ರಕರಣ ಕುರಿತು ಸಿಬಿಐ ತನಿಖೆಗೂ ಒತ್ತಾಯಿಸಲಾಗುವುದು. ಸದ್ಯಕ್ಕೆ ಕರೀಂ ಲಾಲ ತೆಲಗಿ ಪರಪ್ಪನ ಅಗ್ರಹಾರದಲ್ಲೇ ಇದ್ದು, ಆತನಿಗೆ ಭಾರೀ ಕೋಪ ಬಂದಿದೆ.

(ಇನ್ಫೋ ವಾರ್ತೆ)

ಇದನ್ನೂ ಓದಿ-
9 ಸಾವಿರ ರುಪಾಯಿ ಪಗಾರ ಪಡೆಯುವ ಈ ಪೊಲೀಸನ ಆಸ್ತಿ 100 ಕೋಟಿ !

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+