ವೆನಿಲ್ಲಾಕ್ಕೆ ಶರಣಾದ ರೈತರಿಗೆ ಆಘಾತ, ರಫ್ತಿನಲ್ಲಿ ಶೇ.30 ಕಡಿತ

ವೆನಿಲ್ಲಾಕ್ಕೆ ಶರಣಾದ ರೈತರಿಗೆ ಆಘಾತ, ರಫ್ತಿನಲ್ಲಿ ಶೇ.30 ಕಡಿತ
ಅಡಿಕೆಯಲ್ಲಿ ಬಾರದ ಕಾಸನ್ನು ವೆನಿಲ್ಲಾದಲ್ಲಿ ಹುಡುಕಿದ ರೈತರು

ಬೆಂಗಳೂರು: ಅಡಿಕೆ ಬೆಳೆಯ ಬೆಲೆ ಪಾತಾಳಕ್ಕೆ ಕುಸಿದ ನಂತರ ರೈತರು ಅಡಿಕೆ ತೋಟದಲ್ಲಿ ಬದಲಿ ಬೆಳೆಯಾಗಿ ವೆನಿಲ್ಲಾವನ್ನು ಆರಿಸಿಕೊಂಡರು. ಕೆಜಿಯಾಂದಕ್ಕೆ ಸಾವಿರಾರು ರೂಪಾಯಿ ರೊಕ್ಕ ತಂದುಕೊಡುವ ವೆನಿಲ್ಲಾ ಬೆಳೆಯನ್ನು ವಿಪರೀತ ಬೆಳೆದುದರ ಪರಿಣಾಮವಾಗಿ ಹಾಗೂ ಶೀಘ್ರ ಹಣ ಮಾಡುವ ಲಾಲಸೆಯಿಂದಾಗಿ ಅರೆ ಬರೆ ಸಂಸ್ಕರಿತ ವೆನಿಲ್ಲಾವನ್ನು ರಫ್ತು ಮಾರುಕಟ್ಟೆಗೆ ಸಾಗಿಸಿದ ಪರಿಣಾಮವಾಗಿ ವೆನಿಲ್ಲಾ ರಫ್ತಿನಲ್ಲಿ ಈ ಬಾರಿ ಶೇ. 30ರಷ್ಟು ಕಡಿತ ಮಾಡಲಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಸಂಸದ ಕಸ್ತೂರಿ ರಂಗನ್‌ ತಿಳಿಸಿದ್ದಾರೆ.

ಅವರು ಮಂಗಳವಾರ ‘ಭಾರತೀಯ ಕೈಗಾರಿಕೆಗಳ ಗುಣಮಟ್ಟ ಸಮ್ಮೇಳನ’ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾ ಗುಣಮಟ್ಟಕ್ಕೆ ಹೆಸರಾಗಿತ್ತು. ಆದರೆ ಇತ್ತೀಚೆಗೆ ಗುಣಮಟ್ಟದಲ್ಲಿ ವ್ಯತ್ಯಾಸವಾಗಿರುವುದರಿಂದ ರಫ್ತು ಮಾರುಕಟ್ಟೆಯಲ್ಲಿ ಭಾರತೀಯ ವೆನಿಲ್ಲಾದ ಬೇಡಿಕೆ ಕುಸಿದಿದೆ ಎಂದು ಕಸ್ತೂರಿ ರಂಗನ್‌ ಹೇಳಿದರು.

ಮಾರುಕಟ್ಟೆಗೆ ಅತೀ ಹೆಚ್ಚು ವೆನಿಲ್ಲಾ ಬರುವುದು ಕೇರಳದಿಂದ. ದೇಶದಲ್ಲಿ ಒಟ್ಟು 500 ಹೆಕ್ಟೇರುಗಳಲ್ಲಿ ವೆನಿಲ್ಲಾ ಬೆಳೆಯಲಾಗುತ್ತದೆ. ಅದರಲ್ಲಿ 200 ಹೆಕ್ಟೇರು ಪ್ರದೇಶ ಕೇರಳದಲ್ಲಿದೆ. ವೆನಿಲ್ಲಾ ರಫ್ತು ನಿಯಂತ್ರಣ ಅನಿವಾರ್ಯವಾಗಿದೆ ಎಂದು ಕಸ್ತೂರಿ ರಂಗನ್‌ ಅಭಿಪ್ರಾಯಪಟ್ಟರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+