ಕಂಬಾರರ ಗೌರವಾರ್ಥ ನಾಟಕ ಅಕಾಡೆಮಿಯಿಂದ ನಾಟಕೋತ್ಸವ

ಕಂಬಾರರ ಗೌರವಾರ್ಥ ನಾಟಕ ಅಕಾಡೆಮಿಯಿಂದ ನಾಟಕೋತ್ಸವ
ಅ. 27ರಂದು ರಾಜ್ಯ ಮಟ್ಟದ ನಾಟಕೋತ್ಸವ ಆರಂಭ

ಬೆಂಗಳೂರು : ಡಾ. ಚಂದ್ರಶೇಖರ್‌ ಕಂಬಾರರ ಗೌರವಾರ್ಥ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯ ನಾಟಕ ಅಕಾಡೆಮಿಯು ಐದು ದಿನಗಳ ನಾಟಕೋತ್ಸವವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ.

ಅಕ್ಟೋಬರ್‌ 27ರಿಂದ ಒಂದು ವಾರದ ಕಾಲ ರಾಜ್ಯದ ವಿವಿಧೆಡೆಗಳಲ್ಲಿ ಚಂದ್ರಶೇಖರ ಕಂಬಾರರ ನಾಟಕಗಳನ್ನು ಪ್ರದರ್ಶಿಸಲು ಅಕಾಡೆಮಿ ಸಿದ್ಧವಾಗಿದೆ. ಕಂಬಾರರು ಕಬೀರ ಸಮ್ಮಾನ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಅಭಿನಂದನಾ ರೂಪದಲ್ಲಿ ಈ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಾಟಕ ಅಕಾಡೆಮಿಯ ಅಧ್ಯಕ್ಷ ಆರ್‌. ನಾಗೇಶ್‌ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ಎಡಿಎ ರಂಗಮಂದಿರದಲ್ಲಿಯೂ ಕಂಬಾರರ ನಾಟಕಗಳನ್ನು ಪ್ರದರ್ಶಿಸಲಾಗುವುದು.

ಇಕ್ಬಾಲ್‌ ಅಹ್ಮದ್‌ ಅವರ ನಿರ್ದೇಶನದ ‘ಸಾಂಗ್ಯಾ ಬಾಳ್ಯಾ’ ಮತ್ತು ನಟರಾಜ್‌ ಹೊನ್ನವಳ್ಳಿ ನಿರ್ದೇಶನದ ‘ಸಾಂಬಸದಾಶಿವ’ ಪ್ರಹಸನ - ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳಲಿದೆ. ಅರಸೀಕೆರೆಯ ವಿಜ್ಞಾನ ತಂಡವು ಉದ್ಘಾಟನಾ ನಾಟಕವಾಗಿ, ಜೀವನರಾಮ್‌ ಸುಳ್ಯ ನಿರ್ದೇಶನದ ‘ಮಹಾಮಾಯಿ’ ನಾಟಕವನ್ನು ಪ್ರದರ್ಶಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+