ರಾಮಮಂದಿರ ನಿರ್ಮಾಣವಾಗಲೇಬೇಕು -ರವಿಶಂಕರ್ ಗುರೂಜಿ
ರಾಮಮಂದಿರ ನಿರ್ಮಾಣವಾಗಲೇಬೇಕು -ರವಿಶಂಕರ್ ಗುರೂಜಿ
‘ಇಂದಲ್ಲ ನಾಳೆ ಮುಸ್ಲಿಮರು ಆ ಜಾಗವನ್ನು ಬಿಟ್ಟುಕೊಟ್ಟಾರು’
ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಬೇಕೋ ಅಥವಾ ಮಂದಿರ ನಿರ್ಮಿಸಬೇಕೋ ಎಂಬ ಪ್ರಶ್ನೆಗೆ ಉತ್ತರಿಸುತ್ತ ರವಿಶಂಕರ್, ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರವನ್ನೇ ನಿರ್ಮಿಸಬೇಕು. ಅದು ಪ್ರವಾದಿ ಮಹಮ್ಮದರ ಜನ್ಮಭೂಮಿಯಾಗಿದ್ದರೆ ಅದನ್ನು ಮುಸ್ಲಿಮರಿಗೆ ಬಿಟ್ಟುಕೊಡಬಹುದಿತ್ತು ಎಂದರು.
ಅಯೋಧ್ಯೆ ರಾಮನ ಜನ್ಮಸ್ಥಳ. ಅದು ಮುಸ್ಲಿಮರ ಪವಿತ್ರ ಸ್ಥಳವಾಗಿದ್ದರೆ ಅಲ್ಲಿಗೆ ಮುಸಲ್ಮಾನರೆಲ್ಲಾ ತೀರ್ಥ ಯಾತ್ರೆ ಹಮ್ಮಿಕೊಳ್ಳುತ್ತಿದ್ದರು. ಆದರೆ ಅಯೋಧ್ಯೆ ಹಿಂದೂಗಳಿಗಷ್ಟೇ ಪವಿತ್ರ ಸ್ಥಳವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದ ಮುಸ್ಲಿಮರು ಆ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡುವುದು ಸೂಕ್ತ. ಇಂದಲ್ಲ ನಾಳೆ ಅವರು ಆ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಬಹುದು ಎಂದು ರವಿಶಂಕರ್ ಆಶಾವಾದ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications