ಬೆಂಗಳೂರಿಗೆ ಸದ್ಯದಲ್ಲೇ ಬರುವರು ಸನಾದಿಅಪ್ಪಣ್ಣ ಬಿಸ್ಮಿಲ್ಲಾ ಖಾನ್
ಬೆಂಗಳೂರಿಗೆ ಸದ್ಯದಲ್ಲೇ ಬರುವರು ಸನಾದಿಅಪ್ಪಣ್ಣ ಬಿಸ್ಮಿಲ್ಲಾ ಖಾನ್
ಬಿಸ್ಮಿಲ್ಲಾಖಾನ್‌ಗೆ ನಿಧಿ ಅರ್ಪಿಸಲು ನಿರ್ಧಾರ
ಕರ್ನಾಟಕದ ಜನತೆಯ ಪರವಾಗಿ ಬಿಸ್ಮಿಲ್ಲಾ ಖಾನ್ ಅವರನ್ನು ಸತ್ಕರಿಸಲು ಹಾಗೂ ನಿಧಿ ಅರ್ಪಿಸಲು ನಿರ್ಧರಿಸಲಾಗಿದೆ ಎಂದು ಪದ್ಮಾವತಿ ಕಲಾ ನಿಕೇತನ ನೃತ್ಯ ಸಂಗೀತ ಸಂಸ್ಥೆಯ ಅಧ್ಯಕ್ಷ ಎ.ರಾಧಾಕೃಷ್ಣರಾಜು ತಿಳಿಸಿದ್ದಾರೆ. ಗುರುವಾರ ನಡೆದ ಸಂಸ್ಥೆಯ 23ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಜನತೆ ಬಿಸ್ಮಿಲ್ಲಾ ಖಾನ್ ಅವರ ಸನಾದಿಯ ಮಾಂತ್ರಿಕ ನಾದವನ್ನು ಕೇಳುವ ಘಳಿಗೆ ಹತ್ತಿರದಲ್ಲೇ ಇದೆ ಎಂದೂ ರಾಧಾಕೃಷ್ಣರಾಜು ಹೇಳಿದರು. ಸಮಾರಂಭದಲ್ಲಿ ರಾಜು ಕ್ಷತಿಯ ಸಂಘದ ಅಧ್ಯಕ್ಷ ಕೆ.ಟಿ.ರಾಮರಾಜು ಅವರನ್ನು ಸನ್ಮಾನಿಸಲಾಯಿತು.
ವಿಧಾನಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ , ರಾಜಸಭಾ ಸದಸ್ಯೆ ಬಿಂಬಾ ರಾಯ್ಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications