ಆರ್ಟ್‌ ಆಫ್‌ ಲಿವಿಂಗ್‌ ರವಿಶಂಕರ್‌ರಿಂದ ‘ಸಂಚಾರ ಕೃಷಿ ಸಂಸ್ಥೆ’

ಆರ್ಟ್‌ ಆಫ್‌ ಲಿವಿಂಗ್‌ ರವಿಶಂಕರ್‌ರಿಂದ ‘ಸಂಚಾರ ಕೃಷಿ ಸಂಸ್ಥೆ’
ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ರವಿಶಂಕರ್‌ ಕಾರ್ಯಕ್ರಮ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯುವ ಉದ್ದೇಶದ ‘ಶ್ರೀ ಶ್ರೀ ಸಂಚಾರ ಕೃಷಿ ಸಂಸ್ಥೆ’ಯನ್ನು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ಪ್ರಾರಂಭಿಸಿದ್ದಾರೆ.

ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳು ತಮ್ಮ ಮನಸ್ಸಿಗೆ ನೋವುಂಟು ಮಾಡುತ್ತಿವೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸದಲ್ಲಿ ಪ್ರತಿಯಾಬ್ಬರೂ ಭಾಗಿಯಾಗಬೇಕು ಎಂದು ರವಿಶಂಕರ್‌ ಹೇಳಿದರು. ‘ಶ್ರೀ ಶ್ರೀ ಸಂಚಾರ ಕೃಷಿ ಸಂಸ್ಥೆ’ಗೆ ಸೋಮವಾರ (ಅ.13) ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಆಡಳಿತ ಹಾಗೂ ಗ್ರಾಮೀಣ ರೈತರ ನಡುವೆ ದೊಡ್ಡ ಕಂದರ ಉಂಟಾಗಿದೆ. ಈ ಕಂದರವನ್ನು ನಿವಾರಿಸಿ ರೈತರ ನಿಜವಾದ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಬೇಕಾಗಿದೆ ಎಂದು ರವಿಶಂಕರ್‌ ಅಭಿಪ್ರಾಯಪಟ್ಟರು.

ನಮ್ಮ ಸಂಸ್ಥೆಯ ಕಾರ್ಯಕರ್ತರು 15 ಸಾವಿರ ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದು , ಸಾವಿರಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ಒಂದು ಸಾವಿರ ಮನೆಗಳನ್ನು ಹಳ್ಳಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ರವಿಶಂಕರ್‌ ತಿಳಿಸಿದರು. ತ್ರಿಪುರಾದಲ್ಲಿನ ರೈತರು ಬೆಳೆಯುವ ವಿಶ್ವದ ಅತ್ಯುತ್ತಮ ಅನಾನಸ್‌ಗಳಿಗೆ ನಮ್ಮಲ್ಲಿ ಮಾರುಕಟ್ಟೆಯಿಲ್ಲ , ಆದರೆ ವಿದೇಶಗಳಿಂದ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ, ಇದೊಂದು ವಿಪರ್ಯಾಸ ಎಂದು ರವಿಶಂಕರ್‌ ವಿಷಾದಿಸಿದರು.

ರೈತರ ಆತ್ಮಹತ್ಯೆಗೆ ಜಾಗತೀಕರಣವೇ ಕಾರಣ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ರೈತಸಂಘದ ಅಧ್ಯಕ್ಷ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು. ಹೆಚ್ಚುವರಿ ಕೃಷಿ ನಿರ್ದೇಶಕ ಎಸ್‌.ಸಿ.ವಿ.ರೆಡ್ಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+