ಇನ್ನು ಹನ್ನೊಂದು ದಿನದಲ್ಲಿ 2ಲಕ್ಷ ದಲಿತರ ಬೌದ್ಧಧರ್ಮ ಮತಾಂತರ
ಇನ್ನು ಹನ್ನೊಂದು ದಿನದಲ್ಲಿ 2ಲಕ್ಷ ದಲಿತರ ಬೌದ್ಧಧರ್ಮ ಮತಾಂತರ
ಇಂಥಾ ಕನಸನ್ನು ನನಸಾಗಿಸಲು ಬೌದ್ಧ ಸಂಸ್ಥೆಯಾಂದು ಟೊಂಕ ಕಟ್ಟಿದೆ
ನಲವತ್ತೆಂಟು ವರ್ಷಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವಾದ ಅಕ್ಟೋಬರ್ 14ರಂದು 2 ಲಕ್ಷ ದಲಿತರನ್ನು ಬೌದ್ಧ ಧರ್ಮಕ್ಕೆ ಸೇರಿಸಿಕೊಳ್ಳುವುದು ಸಂಸ್ಥೆಯ ಗುರಿ. ಹಿಂದೂ ಧರ್ಮದಲ್ಲಿ ದಲಿತರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಲ್ಲಿ ಆತ್ಮಗೌರವ ಹೆಚ್ಚಾಗುತ್ತದೆ. ಈ ಏಕೈಕ ಕಾರಣಕ್ಕೆ ಮತಾಂತರದ ಪ್ರಚಾರ ಮಾಡುತ್ತಿದ್ದೇವೆ ಎಂದು ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಆರ್.ಎ.ಔದಿ ಶುಕ್ರವಾರ (ಅ. 03) ಸುದ್ದಿಗಾರರಿಗೆ ಹೇಳಿದರು.
ಯಾವ ದಲಿತರನ್ನೂ ಬಲವಂತವಾಗಿ ಮತಾಂತರಗೊಳಿಸುವುದಿಲ್ಲ. ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಬೌದ್ಧ ಧರ್ಮದಲ್ಲಿ ಜಾತಿ ಪದ್ಧತಿಯ ಕಾಟಗಳಿಲ್ಲ. ಇದನ್ನು ಮನದಟ್ಟು ಮಾಡಿಸುವ ಕೆಲಸವನ್ನಷ್ಟೆ ಪ್ರಚಾರಕರು ಮಾಡುತ್ತಾರೆ. ಬೌದ್ಧ ಧರ್ಮಕ್ಕೆ ಸೇರುವುದು ಅವರವರಿಗೆ ಬಿಟ್ಟ ವಿಷಯ ಎಂದರು.
ದಲಿತ ಸಂಘಟನೆಗಳು, ಸಾಹಿತಿಗಳು, ಬುದ್ಧಿ ಜೀವಿಗಳು, ಸಾಮಾಜಿಕ ಚಳವಳಿಕಾರರು ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದು, 2 ಲಕ್ಷ ದಲಿತರನ್ನು ಮತಾಂತರಗೊಳಿಸುವ ಕನಸು ನನಸಾಗುತ್ತದೆ ಅನ್ನುವುದು ಔದಿ ನಂಬುಗೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications