‘ಗಣೇಶನಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ, ಜಲಮಾಲಿನ್ಯ ತಡೆಗಟ್ಟಿ’
‘ಗಣೇಶನಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ, ಜಲಮಾಲಿನ್ಯ ತಡೆಗಟ್ಟಿ’
ಪರಿಸರ ರಕ್ಷಣೆಗೆ ಸಾರ್ವಜನಿಕರಲ್ಲಿ ಪರಿಸರ ಮಾಲಿನ್ಯ ಮಂಡಳಿ ಮನವಿ
ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಬಣ್ಣದಲ್ಲಿನ ಸೀಸ ಹಾಗೂ ಇತರ ರಾಸಾಯಿನಿಕಗಳು ನೀರಿನಲ್ಲಿ ಸೇರುವ ಮೂಲಕ ಜಲ ಮಾಲಿನ್ಯ ಉಂಟಾಗುತ್ತದೆ. ಆ ಕಾರಣದಿಂದಾಗಿ ಗಣೇಶನ ಮೂರ್ತಿ ತಯಾರಿಸುವವರು ರಾಸಾಯಿನಿಕ ಬಣ್ಣಗಳ ಬದಲಾಗಿ ನೈಸರ್ಗಿಕ ಬಣ್ಣಗಳನ್ನು ಬಳಸುವ ಮೂಲಕ ಜಲಮಾಲಿನ್ಯ ತಡೆಗಟ್ಟಲು ನೆರವಾಗಬೇಕು ಎಂದು ಮಂಡಳಿ ತಿಳಿಸಿದೆ.
ಗಣೇಶನ ತಯಾರಿಕೆ ಹಾಗೂ ವಿಸರ್ಜನೆ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕರ ಗಮನಕ್ಕೆ ಕೆಲವು ಸೂಚನೆಗಳನ್ನು ತಂದಿದೆ. ಅವುಗಳೆಂದರೆ-
- ಗಣೇಶ ಮೂರ್ತಿಯ ತಯಾರಿಕೆಯಲ್ಲಿ ಜೇಡಿ ಮಣ್ಣಿನ ಬದಲಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಬೇಕು.
- ಅಲಂಕಾರಿಕ ಹಾಗೂ ಪೂಜಾ ಸಾಮಗ್ರಿಗಳನ್ನು ಗಣೇಶ ಮೂರ್ತಿಯ ಜೊತೆಗೆ ವಿಸರ್ಜಿಸಬಾರದು.
- ಮೂರ್ತಿಯ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬದಲು ನೈಸರ್ಗಿಕ ಬಣ್ಣಗಳನ್ನು ಬಳಸಬೇಕು.
- ಕೆರೆ, ಕೊಳ ಇತ್ಯಾದಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಗಣೇಶನ ಮೂರ್ತಿಯನ್ನು ವಿಸರ್ಜಿಸಬೇಕು.
ಮುಖಪುಟ / ವಾರ್ತೆಗಳು












Click it and Unblock the Notifications