ಪ್ರಧಾನಮಂತ್ರಿ ವಾಜಪೇಯಿಯಿಂದ ಗುರುದಕ್ಷಿಣೆ ಸಮರ್ಪಣೆ

ಪ್ರಧಾನಮಂತ್ರಿ ವಾಜಪೇಯಿಯಿಂದ ಗುರುದಕ್ಷಿಣೆ ಸಮರ್ಪಣೆ
ಖಾಸಗಿ ಸಮಾರಂಭದಲ್ಲಿ ಪ್ರಧಾನಿಯಿಂದ ಭಗವಾ ಧ್ವಜ ಪ್ರಣಾಮ

ನವದೆಹಲಿ: ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆ. 6ರ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುದಕ್ಷಿಣೆ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಕೇತಿಕವಾಗಿ ಗುರುದಕ್ಷಿಣೆ ಅರ್ಪಿಸಿದರು.

ಈ ಖಾಸಗಿ ಸಮಾರಂಭದಲ್ಲಿ ವಾಜಪೇಯಿ ಜೊತೆಗೆ ಉಪ ಪ್ರಧಾನಿ ಎಲ್‌. ಕೆ. ಅಡ್ವಾಣಿ ಹಾಗೂ ಮಾನವ ಸಂಪನ್ಮೂಲ ಸಚಿವ ಮುರಳೀ ಮನೋಹರ್‌ ಜೋಶಿ ಕೂಡ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಗವಾ ಧ್ವಜ ಪ್ರಣಾಮ ಮಾಡಿದ ವಾಜಪೇಯಿ ಗುರುದಕ್ಷಿಣೆಯನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ರೈಲ್ವೇ ಇಲಾಖೆಯ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ ಅವರ ಮನೆಯಲ್ಲಿ ಬುಧವಾರ ಬೆಳಗ್ಗೆ ಆಯೋಜಿಸಲಾಗಿತ್ತು.

ಗುರುದಕ್ಷಿಣೆ ರೂಪದಲ್ಲಿ ಮುಚ್ಚಿದ್ದ ಕವರ್‌ನೊಳಗೆ ವಾಜಪೇಯಿ ಎಷ್ಟು ಮೊತ್ತವನ್ನು ಅರ್ಪಿಸಿದರು ಎಂಬುದು ತಿಳಿದು ಬಂದಿಲ್ಲ. ಕಾರ್ಯಕ್ರಮದಲ್ಲಿ ಗುರು-ಶಿಷ್ಯ ಪರಂಪರೆಯ ಬಗ್ಗೆ ಆರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿ ಮೋಹನ್‌ರಾವ್‌ ಭಾಗವತ್‌ ಪುಟ್ಟ ಭಾಷಣ ಮಾಡಿದರು. ಹಲವಾರು ಮಂದಿ ಸಂಸದರು ಹಾಗೂ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+