ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಲ್ಲಿ ಏಡ್ಸ್‌ ಜಾಗೃತಿ ಮೂಡಿಸಲು ಲಯನ್ಸ್‌ ಕ್ಲಬ್‌ ಸಜ್ಜು

By Staff
|
Google Oneindia Kannada News

ಮಂಗಳೂರಲ್ಲಿ ಏಡ್ಸ್‌ ಜಾಗೃತಿ ಮೂಡಿಸಲು ಲಯನ್ಸ್‌ ಕ್ಲಬ್‌ ಸಜ್ಜು
ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡುವ ಯೋಜನೆ

ಮಂಗಳೂರು: ಜಿಲ್ಲೆಯಲ್ಲಿ ಅಪಾಯಕಾರಿಯಾಗಿ ಹರಡುತ್ತಿರುವ ಏಡ್ಸ್‌ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊಸದಾಗಿ ರಚಿಸಲಾಗಿರುವ ಲಯನಿಸ್ಟಿಕ್‌ ಜಿಲ್ಲಾ 324-ಡಿ5 ಕ್ಲಬ್‌ ತನ್ನ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಕ್ಲಬ್‌ನ ಜಿಲ್ಲಾ ಗವರ್ನರ್‌ ಲಯನ್‌ ಡಾ. ರಾಮದಾಸ್‌ ರೈ ತಿಳಿಸಿದ್ದಾರೆ.

ದೇಶದಲ್ಲಿ ಏಡ್ಸ್‌ ಸಿಕ್ಕಾಪಟ್ಟೆ ಹರಡುತ್ತಿದೆ. ಅದರಲ್ಲೂ ಸಾರಿಗೆ ವಲಯದಲ್ಲಿ ದುಡಿಯುತ್ತಿರುವವರಲ್ಲಿ ತೀವ್ರ ಪ್ರಮಾಣದಲ್ಲಿ ಹರಡುತ್ತಿದೆ. ವಲಸೆ ಬಂದ ದುಡಿಮೆಗಾರರು ಹಾಗೂ ಬಾಲ ಅಪರಾಧಿಗಳು ಏಡ್ಸ್‌ ರೋಗಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಲಯನ್ಸ್‌ ಕ್ಲಬ್‌ಗಳು ಕೈಗೆತ್ತಿಕೊಂಡಿವೆ. ದೇಶದಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ 8ರಿಂದ 10 ಏಡ್ಸ್‌ ಪ್ರಕರಣಗಳು ವರದಿಯಾಗುತ್ತಿವೆ ಎಂದು ರಾಮದಾಸ್‌ ವಿಷಾದಿಸಿದರು.

ಜಿಲ್ಲೆಯ ಪ್ರಾದೇಶಿಕ ಲಯನ್ಸ್‌ ಕ್ಲಬ್‌ಗಳ ಸಹಯೋಗದಲ್ಲಿ ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡುವ ಯೋಜನೆಯನ್ನೂ ಲಯನ್ಸ್‌ ಕ್ಲಬ್‌ ಪ್ರಾರಂಭಿಸಲಿದೆ. ಜಿಲ್ಲಾದ್ಯಂತ 80 ಲಯನ್ಸ್‌ ಕ್ಲಬ್‌ ಇದೆ. ಕನಿಷ್ಠ ಒಂದು ಕ್ಲಬ್‌ ವತಿಯಿಂದ ಒಂದು ಮನೆ ಕಟ್ಟಿಕೊಡಲು ಪ್ರಯತ್ನಿಸಲಾಗುವುದು. ಈ ಬಗ್ಗೆ ನೀಲಿ ನಕಾಶೆ ತಯಾರಿಕೆ ಕೆಲಸ ಈಗಾಗಲೇ ಆರಂಭವಾಗಿದೆ. ಉಳಿದಂತೆ ಕಣ್ಣಿನ ರಕ್ಷಣೆ, ಆರೋಗ್ಯ ಕಾಳಜಿಯ ಕಾರ್ಯಕ್ರಮಗಳು, ಪೌರ ಅಗತ್ಯಗಳ ಕುರಿತಂತೆ ಕಾರ್ಯಕ್ರಮಗಳನ್ನು ಕ್ಲಬ್‌ ಕೈಗೆತ್ತಿಕೊಳ್ಳಲಿದೆ ಎಂದು ರಾಮದಾಸ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X