ಹಿಂದೂಗಳ ಮೇಲಿನ ದೌರ್ಜನ್ಯ ವಿರುದ್ಧ ತೊಗಾಡಿಯಾ ಕಿಡಿಕಿಡಿ
ಹಿಂದೂಗಳ ಮೇಲಿನ ದೌರ್ಜನ್ಯ ವಿರುದ್ಧ ತೊಗಾಡಿಯಾ ಕಿಡಿಕಿಡಿ
ಬಿಜಾಪುರದಲ್ಲಿ ಬೃಹತ್ ವಿರಾಟ್ ಹಿಂದೂ ಸಮಾವೇಶ
ದೇಶದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣಲಾಗುತ್ತಿದೆ. ವಿಶ್ವದಲ್ಲೇ ಬಹುಸಂಖ್ಯಾತರ ಮೇಲೆ ಹಲ್ಲೆಯಾಗುವ ರಾಷ್ಟ್ರವೆಂದರೆ ಭಾರತ. ಇಲ್ಲಿನ ದೇವಾಲಯಗಳ ಮೇಲೆ ಆಕ್ರಮಣ, ಗೋಧ್ರಾ, ಗುಜರಾತಿನ ಸ್ವಾಮಿ ನಾರಾಯಣ ದೇವಳದಲ್ಲಿ ಮುಗ್ಧರ ಹತ್ಯೆ, ವೈಷ್ಣವಿ ದೇವಿ ಭಕ್ತರ ಕೊಲೆ... ಹೀಗೆ ಸರಾಸರಿ ಅನ್ಯಾಯಗಳು ನಡೆಯುತ್ತಲೇ ಇದ್ದರೂ, ಹಿಂದೂಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ತೊಗಾಡಿಯಾ ತಮ್ಮ ಭಾಷಣದಲ್ಲಿ ಆರೋಪಿಸಿದರು.
ತಮ್ಮ ಪ್ರವೇಶದ ವಿರುದ್ಧ ಹೇರಿದ್ದ ನಿಷೇಧಾಜ್ಞೆಯ ಕುರಿತು ಪ್ರತಿಕ್ರಿಯಿಸಿದ ತೊಗಾಡಿಯಾ ಕರ್ನಾಟಕದಲ್ಲಿ ಕೃಷ್ಣ ಸರಕಾರವಿದೆಯೋ, ಕಂಸ ಸರಕಾರವಿದೆಯೋ ಗೊತ್ತಾಗುತ್ತಿಲ್ಲ ಎಂದರು.
ಪಾಕ್‌ನಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಬಂದ ನೂರ್‌ಗೆ ಲಕ್ಷಾಂತರ ರೂಪಾಯಿ ಸಹಾಯ ನೀಡಿದರು. ಆದರೆ ರಾಜ್ಯದಲ್ಲಿ ಹೃದಯ ಕಾಯಿಲೆಯಿಂದ ಬಳಲುತ್ತಿರುವ ನೂರಾರು ಮಕ್ಕಳಿಗೆ ಸರಕಾರದಿಂದ ಚಿಕ್ಕಾಸಿನ ನೆರವು ಒದಗಿಲ್ಲ ಎಂದು ಟೀಕಿಸಿದ ಅವರು- ಮುಸ್ಲಿಂ ವಿಚ್ಛೇದಿತ ಮಹಿಳೆಗೆ ಮಾಸಾಶನ ನೀಡುವ ಸರಕಾರ ಇದನ್ನು ಇತರ ಸಮುದಾಯಕ್ಕೆ ಏಕೆ ವಿಸ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಮಮಂದಿರ ಚಳವಳಿಯನ್ನು ಮರೆಯದೇ ಪ್ರಸ್ತಾಪಿಸಿದ ತೊಗಾಡಿಯಾ ಈ ಕುರಿತು ಕಾನೂನು ನಿರ್ಮಿಸುವಂತೆ ಜನಾಂದೋಳನ ರೂಪಿಸಲಾಗುವುದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications