ರಾಷ್ಟ್ರಪತಿ ಕಲಾಂ ಸಾಹೇಬರಿಗೆ ಬಹಿರಂಗ ಪತ್ರ

ರಾಷ್ಟ್ರಪತಿ ಕಲಾಂ ಸಾಹೇಬರಿಗೆ ಬಹಿರಂಗ ಪತ್ರ

Kalam Sir, you have to do a lotಪ್ರಿಯ ಕಲಾಂಜಿ,

ಭಾರತದ ರಾಷ್ಟ್ರಪತಿಯಾಗಿ ಒಂದು ವರುಷ ಪೂರೈಸಿದ ಸಂದರ್ಭದಲ್ಲಿ ಶುಭಾಶಯಗಳು.

ನಿಮ್ಮ ಕುರಿತು ಬಹಳಷ್ಟು ಓದಿದ್ದೇನೆ, ಕೇಳಿದ್ದೇನೆ. 2020 ಇಸವಿಯ ವೇಳೆಗೆ ಭಾರತ ಮುಂದುವರೆದ ದೇಶವಾಗುವ ಹಂಬಲವನ್ನು ನೀವು ವ್ಯಕ್ತಪಡಿಸಿದ್ದೀರಿ. ನಿಮ್ಮ ಅಧಿಕಾರಾವಧಿ ಪೂರೈಸುವ ವೇಳೆಗೆ ನಿಮ್ಮಿಂದ ಕೆಲವು ಕೆಲಸಗಳು ಆಗಬೇಕಾಗಿದೆ.

  • ಜಾತಿ, ಮತ, ಧರ್ಮಗಳನ್ನು ಪರಿಗಣಿಸದೆ ಪ್ರತಿಯಾಬ್ಬ ಮನುಷ್ಯನಿಗೂ ಅನ್ವಯವಾಗುವಂಥ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿ.
  • ಎಲ್ಲ ನಾಗರಿಕರು ‘ವಿಶೇಷ ಗುರುತು ಪತ್ತೆ’ ಗೆ ಒಳಗಾಗುವ ವಿಧಾನ ರೂಪಿತವಾಗಲಿ. ಮುಖ್ಯವಾಗಿ ಕಪ್ಪು ಹಣವನ್ನು ಪತ್ತೆ ಹಚ್ಚಲು ನಾಗರಿಕರು ಮತ್ತವರ ಕುಟುಂಬ ವರ್ಗಕ್ಕೆ ವಿಶಿಷ್ಠವಾದ ಐಡೆಂಟಿಟಿ ಪ್ರಾಪ್ತವಾಗಲಿ.
  • ನ್ಯಾಯ ವಿಲೇವಾರಿ ಶೀಘ್ರವಾಗಬೇಕು ಮತ್ತು, ಮತ್ತಷ್ಟು ಕಠಿಣತಮವಾಗಬೇಕು.
  • ಜಾತಿ, ಮತ, ಧರ್ಮದ ತಾರತಮ್ಯವಿಲ್ಲದೆ ಹತ್ತನೆ ತರಗತಿತನಕ ವಿದ್ಯಾದಾನ ಉಚಿತವಾಗಿರಲಿ.
  • ದೇಶದ ಯಾವುದೇ ಭಾಗದಲ್ಲಿ ಬಸ್ಸು ಕಚೇರಿ ಮುಂತಾದ ಆಸ್ತಿಪಾಸ್ತಿಯನ್ನು ಬೆಂಕಿಹಾಕಿ ಸುಟ್ಟರೆ, ಆ ನಷ್ಟ ಭರಿಸುವ ಉದ್ದೇಶದ ವಿಶೇಷ ತೆರಿಗೆಯನ್ನು ಆ ಭಾಗದ ಜನತೆಯ ತಲೆಯ ಮೇಲೆ ಹಾಕಿ.
  • ಜಾಸ್ತಿ ತನಿಖೆಗೆ ಅವಕಾಶವೀಯದೆ ಭ್ರಷ್ಟ ಉದ್ಯೋಗಿಗಳನ್ನು ಶಿಕ್ಷೆಗೆ ಗುರಿಪಡಿಸಿ.
    ದಯವಿಟ್ಟು ಈ ವಿಚಾರಗಳ ಬಗ್ಗೆ ಗಮನ ಹರಿಸಿ. ಇದೇ ದಿಕ್ಕಿನಲ್ಲಿ ನೀವು ನಾಲಕ್ಕು ವರ್ಷ ಕೆಲಸ ಮಾಡಿದರೆ ಸಾಕು. ಭಾರತದ ಪ್ರಗತಿಯ ವೇಗ ಹೆಚ್ಚುತ್ತದೆ. ತುಂಬಾ ವಿದ್ಯಾವಂತರೂ, ಉದಾರಿಗಳೂ, ರಾಜಕೀಯದಿಂದ ಹೊರಗುಳಿದವರೂ ಆದ ನಿಮ್ಮಂಥವರಿಂದ ಈ ಕೆಲಸ ಸಾಧ್ಯ. ನಾನು ಪ್ರಸ್ತಾಪಿಸಿರುವ ಈ ವಿಷಯಗಳನ್ನು ಜಾರಿಗೆ ತರುವಂತೆ ಲೋಕಸಭೆಯನ್ನು ನೀವು ಒತ್ತಾಯಿಸಬೇಕು.
  • ನನ್ನ ಕಾಣಿಕೆಯಾಗಿ, ನಾನು ಭಾರತಕ್ಕೆ ಹಣ ಕಳಿಸುತ್ತೇನೆ.
ನಿಮಗೆ ಸರ್ವತ್ರ ಶುಭವಾಗಲಿ.

ರುಕ್ಮಾಂಗದ ರೆಡ್ಡಿ,
ರೋಚೆಸ್ಟರ್‌, ನ್ಯೂಯಾರ್ಕ್‌

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+