ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಏಳನೇ ಕ್ಲಾಸಿಗೆ ಸೆಕ್ಸು ಪಾಠ- ಶಿವ ಶಿವ !’

By Staff
|
Google Oneindia Kannada News

‘ಏಳನೇ ಕ್ಲಾಸಿಗೆ ಸೆಕ್ಸು ಪಾಠ- ಶಿವ ಶಿವ !’
ಎಳೆಯ ಮನಸ್ಸುಗಳಿಗೆ ಸಂತಾನ ಕ್ರಿಯೆಯ ಪಾಠವನ್ನು ತುರುಕಿಸುವ ಸಾಹಸಕ್ಕೆ ಕರ್ನಾಟಕ ಶಿಕ್ಷಣ ಇಲಾಖೆ ಕೈ ಹಾಕಿದೆ. ಆದರೆ ಇಂತಹ ಪಾಠ ಮಾಡುವ ಪೀಕಲಾಟ ಎಂಥದ್ದು ಗೊತ್ತೆ? ಒಬ್ಬ ಶಿಕ್ಷಕ ಬರೆದ ಈ ಪತ್ರದಲ್ಲಿ ಉತ್ತರವಿದೆ..

ಏಳನೇ ಇಯತ್ತೆ ವಿದ್ಯಾರ್ಥಿಗಳಿಗೆ ಸಂತಾನ ಕ್ರಿಯೆಯ ಪಾಠ ಮಾಡಬೇಕಾದ ಪರಿಸ್ಥಿತಿ ಕೆಲವು ಮೇಷ್ಟ್ರು/ಮೇಡಂಗಳಿಗೆ ಜೀರ್ಣಿಸಿಕೊಳ್ಳಲಾರದಂತಾಗಿದೆ. ಆ ಪೈಕಿ ನಾನೂ ಒಬ್ಬ. ಅನಿವಾರ್ಯ ಕಾರಣಗಳಿಂದಾಗಿ ನನ್ನ ಹೆಸರನ್ನು ಗೋಪ್ಯವಾಗಿರಿಸುವಂತೆ ಸಂಪಾದಕರಲ್ಲಿ ವಿನಂತಿಸಿ, ಈ ಪತ್ರ ಬರೆಯುತ್ತಿದ್ದೇನೆ.

ಮಕ್ಕಳಿಗೆ ಪ್ರೌಢ ವಯಸ್ಸಿಗೆ ಬಂದ ನಂತರ ಈ ರೀತಿಯ ಪಾಠ ಮಾಡುವುದು ಈವರೆಗೆ ರೂಢಿಯಲ್ಲಿತ್ತು. 9ನೇ ಹಾಗೂ 10ನೇ ಇಯತ್ತೆ ಯ ಮಕ್ಕಳ ವಯೋ ಸಹಜ ಮನಸ್ಸು ಸಂತಾನ ಕ್ರಿಯೆ ಪಾಠವನ್ನು ತಿಳಿಯುವ ಮಟ್ಟಕ್ಕೆ ಬೆಳೆದಿರುತ್ತದೆ. ಹೀಗಾಗಿ ಮೇಷ್ಟರನ್ನು ಪೇಚಿಗೆ ಸಿಕ್ಕಿಸುವುದಿಲ್ಲ. ಆದರೀಗ ಸಂತಾನ ಕ್ರಿಯೆಯ ಪಾಠವನ್ನು ಮುಗ್ಧ ಮಕ್ಕಳ ಮನಸ್ಸಿಗೆ ತುರುಕುವ ಬಲವಂತಕ್ಕೆ ನಾವು ಕಟ್ಟುಬೀಳುವಂತಾಗಿದೆ.

ಸಂತಾನ ಕ್ರಿಯೆಯಲ್ಲಿ ಪುರುಷರ ಪಾತ್ರವನ್ನು ನಾಲ್ಕೇ ವಾಕ್ಯಗಳಲ್ಲಿ ಹೇಳುವ ಪಾಠದಲ್ಲಿ ಹೆಂಗಸಿನ ದೇಹದಲ್ಲಾಗುವ ಬೆಳವಣಿಗೆಗಳ ಬಗ್ಗೆ ಪದಗಟ್ಟಲೆ ಬರವಣಿಗೆ ಇದೆ. ಅರೆಬರೆ ತಿಳಿದ ಹೆಣ್ಣು ಮಕ್ಕಳು ಪಾಠ ಕೇಳುವಾಗ ತಮಗೆ ಅವಮಾನವಾಗುತ್ತಿದೆ ಎಂಬಂತೆ ನೋಡುತ್ತಾರೆ. ಎಷ್ಟೋ ಹೆಣ್ಣು ಮಕ್ಕಳು ಪಾಠ ಮುಗಿಯುವತನಕ ಮುಖ ಮೇಲೆತ್ತಿ ನೋಡುವುದೇ ಇಲ್ಲ. ಕೆಲವು ಪುಂಡ ಹುಡುಗರು ಬೇಕಂತಲೇ ತರಲೆ ಪ್ರಶ್ನೆಗಳನ್ನು ಕೇಳುವುದು ಇನ್ನೂ ಅತಿಯೆನಿಸುತ್ತದೆ.

Sex lesson for 7th STD, my God !ನಿಮ್ಹಾನ್ಸ್‌ನ ಮಾನಸಿಕ ತಜ್ಞರು ಒಳ್ಳೆಯ ಸಲಹೆ ಕೊಟ್ಟಿದ್ದಾರೆ- ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಪ್ರೀತಿ, ಪ್ರಾಮಾಣಿಕತೆ, ಮುಕ್ತವಾಗಿರುವುದು, ತದೇಕಚಿತ್ತತೆ ಮೊದಲಾದ ವಿಷಯಗಳನ್ನು ಮನಸ್ಸಿಗೆ ನಾಟುವಂತೆ ಹೇಳಬೇಕು. ಕೇವಲ ಚರಿತ್ರೆ, ಭೂಗೋಳ, ರಾಜ್ಯಶಾಸ್ತ್ರ ಹೇಳುವ ಸಮಾಜ ಶಾಸ್ತ್ರದ ಪಠ್ಯದಲ್ಲಿ ಈ ವಿಷಯಗಳನ್ನು ಅಳವಡಿಸಬಹುದು. ಲೈಂಗಿಕತೆಯ ಪಾಠ ಕೇಳಲು ಬೇಕಾದ ಮಾನಸಿಕ ಸ್ಥಿತಿಗೆ ಈ ರೀತಿಯ ಪಾಠ ಬುನಾದಿ ಹಾಕಿಕೊಡುತ್ತದೆ. ಅದು ಬಿಟ್ಟು ನೇರವಾಗಿ ಲೈಂಗಿಕ ಕ್ರಿಯೆಯ ಬಗ್ಗೆ 7ನೇ ಇಯತ್ತೆ ಮಕ್ಕಳಿಗೆ ಪಾಠ ಮಾಡಿದರೆ ಅವರ ಮನಸ್ಸಲ್ಲಿ ಅಪಸ್ವರ ಎದ್ದೇಳುವ ಅಪಾಯವಿದೆ.

ಮುಖ್ಯವಾಗಿ ಲೈಂಗಿಕತೆಯ ಬಗ್ಗೆ ಏನೇನೂ ಗೊತ್ತಿಲ್ಲದ ಮಕ್ಕಳು ಪಾಠದ ಬಗ್ಗೆ ಅನುಮಾನ ಕೇಳಿದರೆ, ಅದನ್ನು ಮನವರಿಕೆ ಮಾಡಿಸುವುದು ದೊಡ್ಡ ಪೀಕಲಾಟದ ವಿಷಯ.

ಶಿಕ್ಷಣ ಆಯುಕ್ತ ವಿ.ಪಿ.ಬಳಿಗಾರ್‌ ಸಾಕಷ್ಟು ಪರಿಣತರ ಸಲಹೆ ಪಡೆದ ನಂತರವೇ ಈ ಪಠ್ಯ ಅಳವಡಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ, ನಾನೂ ಸೇರಿದಂತೆ ಬಹುತೇಕ ಶಿಕ್ಷಕರಿಗೆ ಈ ರೀತಿಯ ಪಾಠವನ್ನು ಚಿಕ್ಕ ಮಕ್ಕಳಿಗೆ ಮಾಡುವುದು ಶಿಕ್ಷೆ ಎಂದು ಅನಿಸುತ್ತಿದೆ. ಪಠ್ಯ ಪುಸ್ತಕ ಮಂಡಳಿಯವರು ಇಂಥಾ ಸಾಹಸಕ್ಕೆ ಕೈ ಹಾಕುವ ಮುಂಚೆ ಚಿಕ್ಕ ಮಕ್ಕಳಿಗೆ ಪಾಠ ಮಾಡಿದ ಅನುಭವವಿರುವ ಶಿಕ್ಷಣ ತಜ್ಞರ ಸಲಹೆ ಪಡೆಯಲಿ.

ಪ್ರಾಥಮಿಕ ಶಾಲೆಯ ಹಂತದಲ್ಲಿ ದೊಡ್ಡವರಾಗುವ ಹೆಣ್ಣು ಮಕ್ಕಳಿಗೆ ಪ್ರತ್ಯೇೕಕವವಾಗಿ ಲೈಂಗಿಕತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ವೈದ್ಯರು ಕೆಲವು ಶಾಲೆಗಳಲ್ಲಿ ಮಾಡುತ್ತಿದ್ದಾರೆ. ಅಷ್ಟು ಸಾಕಿತ್ತು. ಹುಡುಗರ ಮುಂದೆ ಹುಡುಗಿಯರನ್ನು ಹಾಗೂ ಶಿಕ್ಷಕರನ್ನು ಪೇಚಿಗೆ ಸಿಲುಕಿಸುವುದು ಬೇಡವಾಗಿತ್ತು.

- ನೊಂದ ಶಿಕ್ಷಕ, ಬೆಂಗಳೂರು

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X