ಅಜೀಂ ಆವಾಜ್‌ಗೆ ಕೃಷ್ಣ ಸ್ಪಂದನ, ಸರ್ಜಾಪುರೋದ್ಧಾರಕ್ಕೆ ಕಾರ್ಯಪಡೆ

ಅಜೀಂ ಆವಾಜ್‌ಗೆ ಕೃಷ್ಣ ಸ್ಪಂದನ, ಸರ್ಜಾಪುರೋದ್ಧಾರಕ್ಕೆ ಕಾರ್ಯಪಡೆ
ಇನ್ನು ಮುಂದೆ ನಿಮಗೆ ತೊಂದರೆ ಆಗದಂತೆ ನೋಡ್ಕೋತೀನಿ- ಪ್ರೇಂಜಿಗೆ ಕೃಷ್ಣ ಪತ್ರ

ಬೆಂಗಳೂರು : ಸರ್ಜಾಪುರ ಪ್ರದೇಶದ ಕಳಪೆ ರಸ್ತೆ, ವಿದ್ಯುತ್‌ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಹಾಕಿದ್ದ ಧಮಕಿಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಣಿದಿದ್ದಾರೆ.

ಸರ್ಜಾಪುರ ವಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಕಾರ್ಯಪಡೆಯಾಂದನ್ನು ಕೃಷ್ಣ ರಚಿಸಿದ್ದಾರೆ. ಅಸಮರ್ಪಕ ವಿದ್ಯುತ್‌ ಪೂರೈಕೆ ಮತ್ತು ಕಳಪೆ ರಸ್ತೆ ಬಗ್ಗೆ ಪ್ರೇಂಜಿ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಿಭಟನೆಗೆ ನಿರ್ಧರಿಸುವಷ್ಟು ಅವರು ಕ್ರುದ್ಧರಾಗಿದ್ದರು. ಪತ್ರಿಕೆಗಳಲ್ಲಿ ಪ್ರೇಂಜಿ ಆಕ್ರೋಶ ಓದಿದ ತಕ್ಷಣ ಮುಖ್ಯಮಂತ್ರಿಗಳು ಕಾರ್ಯಪಡೆ ರಚನೆಯ ಪ್ರಕ್ರಿಯೆ ಶುರುವಿಟ್ಟಿದ್ದಾರೆ. ಅಷ್ಟೇ ಅಲ್ಲ, ಖುದ್ದು ಅಜೀಂ ಪ್ರೇಂಜಿ ಅವರಿಗೆ ಒಂದು ಪತ್ರ ಬರೆದು, ರಸ್ತೆಗಳ ರಿಪೇರಿ ಮತ್ತು ಸಮರ್ಪಕ ವಿದ್ಯುತ್‌ ಪೂರೈಕೆಯ ಭರವಸೆ ಕೊಟ್ಟಿದ್ದಾರೆ.

ವಿಪ್ರೋ ಪ್ರಧಾನ ಕಚೇರಿ ಸರ್ಜಾಪುರದಲ್ಲಿದ್ದು, ಗ್ರಾಹಕರ ಜೊತೆ ವ್ಯವಹರಿಸಲು ಮೂಲಭೂತಸೌಕರ್ಯಗಳ ಸಮಸ್ಯೆ ಎಡರಾಗುತ್ತಿದೆ ಎಂಬುದು ಪ್ರೇಂಜಿ ಆಕ್ರೋಶಕ್ಕೆ ಕಾರಣವಾಗಿತ್ತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ವಿದ್ಯುತ್‌ ಇಲ್ಲ-ರಸ್ತೇಲಿ ಗುಂಡಿ ; ಕೃಷ್ಣ ಸರ್ಕಾರಕ್ಕೆ ಪ್ರೇಂಜಿ ಧಮಕಿ

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+