ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲಿಂದ ದಂಡೆಯ ಕೊರೆತ ; ಇವರಿಂದ ಮಂಡೆಯ ಕೊರೆತ !

By Staff
|
Google Oneindia Kannada News

ಕಡಲಿಂದ ದಂಡೆಯ ಕೊರೆತ ; ಇವರಿಂದ ಮಂಡೆಯ ಕೊರೆತ !
ಎರಡು ದಶಕಗಳಲ್ಲಿ ಸಮುದ್ರ ದಂಡೆ ಸಾವಿರ ಮೀಟರುಗಳಷ್ಟು ಒಳಕ್ಕೆ ಬಂದಿದೆ..

ಮಂಗಳೂರು : ಅಲ್ಲಿ ವೀರಪ್ಪನ್‌ ಕಾರ್ಯಾಚರಣೆ ಎಂಬ ನೆಪವೊಂದಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು, ಇಲ್ಲಿ ಕಡಲುಕೊರೆತ ತಡೆಗಟ್ಟುವ ಭರವಸೆಯ ಭಾಷಣಗಳಲ್ಲಿ, ಹಾಳು ಮೂಳು ಘೋಷಣೆಗಳಲ್ಲಿ, ವ್ಯರ್ಥ ಕಾಮಗಾರಿಗಳಲ್ಲಿ ಹಣದ ವೆಚ್ಚ !

ಪ್ರತಿ ಮಳೆಗಾಲ ಬಂದಾಗಲೂ ಕರಾವಳಿಯ ರಾಜಕೀಯ ಪ್ರತಿನಿಧಿಗಳು ತಾವು ಭಾಗವಹಿಸಿದ ಸಮಾರಂಭದಲ್ಲೆಲ್ಲಾ ಕಡಲ್ಕೊರೆತ ತಡೆಗಟ್ಟುವ ಬಗ್ಗೆಯೇ ಭಾಷಣ ಬಿಗಿಯುತ್ತಾರೆ. ಫ್ರಾನ್ಸ್‌ನಿಂದ ತಂತ್ರಜ್ಞಾನ ತರಿಸುವುದಾಗಿ ಹೇಳುತ್ತಾರೆ. ವೆಚ್ಚ ಮಾಡಲಿರುವ ಹಣದ ಮೊತ್ತವನ್ನು ಏರಿಸುತ್ತಾರೆ. ಆದರೆ 1979ರಿಂದಲೂ ಪ್ರತಿ ವರ್ಷ ತೊಂದರೆ ನೀಡುತ್ತಿರುವ ಕಡಲ್ಕೊರೆತ ಸಮಸ್ಯೆ ಬೆಳೆಯುತ್ತಲೇ ಇದೆ.

ಕೋಡಿ ಪಡುಕೆರೆ, ಮೂಳೂರಿನಲ್ಲಿ ಕಿಲೋಮೀಟರುಗಟ್ಟಲೆ ಭೂಮಿ ಕಡಲ್ದಂಡೆ ನೀರು ಪಾಲಾಗುತ್ತಿದೆ. ಆಗಾಗ ತ್ವರಿತ ಕಡಲ್ಕೊರೆತ ತಡೆ ಕಾಮಗಾರಿಗಳನ್ನು ಸಣ್ಣ ನೀರಾವರಿ ಇಲಾಖೆ ಪೂರೈಸಿದ್ದುಂಟು. ಆದರೆ ಅವೆಲ್ಲವೂ ಭಾರೀ ಮಳೆಯಲ್ಲಿ, ಜೋರು ನೆರೆಗಳಲ್ಲಿ ಕೊಚ್ಚಿಕೊಂಡು ಹೋಗಿವೆ. 2000ನೇ ಇಸವಿಯಲ್ಲಿ ಕಡಲ್ಕೊರೆತ ತಡೆಗಟ್ಟುವ ಜವಾಬ್ದಾರಿಯನ್ನು ಬಂದರು ವಿಭಾಗಕ್ಕೆ ಹಸ್ತಾಂತರಿಸಲಾಯಿತು.

ಬಂದರು ವಿಭಾಗ ವರ್ಷಕ್ಕೆ ಎರಡು ಕೋಟಿ ಖರ್ಚು ಮಾಡಿತು. ನಂತರ ಬಂದರು ವಿಭಾಗ ಮತ್ತು ಸಣ್ಣ ನೀರಾವರಿ ಇಲಾಖೆಗಳ ನಡುವೆ ಹಣಕಾಸು ಇತ್ಯರ್ಥಗಳ ಬಗ್ಗೆ ಜಗಳ ಶುರುವಾಯಿತು. ಜಗಳ ಪರಿಹಾರಕ್ಕಾಗಿ ತನಿಖಾ ತಂಡದ ನೇಮಕವಾಯಿತು.

ವಾಸ್ತವದಲ್ಲಿ ನಡೆದ ಕಾಮಗಾರಿ ಇಷ್ಟೇ- ಕಡಲದಂಡೆಯ ಮರಳ ಚೀಲಗಳನ್ನು ಪೇರಿಸುವುದು ಅಥವಾ ದೊಡ್ಡ ಬಂಡೆಗಳನ್ನು ತಂದು ತೆರೆಗಡ್ಡ ಇಡುವುದು. ಈ ಮರಳ ಚೀಲಗಳನ್ನು ನುಂಗುವ ಹೆದ್ದೆರೆಗಳು ಅರಬ್ಬಿ ಸಮುದ್ರದಲ್ಲಿ ಸಾಕಷ್ಟು ಇವೆ ಎಂಬುದು ಬೇರೆ ಮಾತು.

ಅಲ್ಲದೆ ಮರಳ ಬಂಡೆಯ ಲೆಕ್ಕಾಚಾರ ಬರೀ ಕಾಗದದ ಮೇಲಿನ ದಾಖಲೆಯಷ್ಟೇ. ಅಲ್ಲಿನ ನಿವಾಸಿಗಳನ್ನು ಮಾತನಾಡಿಸಿದರೆ ಕಳೆದ ಎರಡು ದಶಕಗಳಲ್ಲಿ ತಾವು ವಾಸಿಸುತ್ತಿರುವ ಸಮುದ್ರ ದಂಡೆ ಸಾವಿರ ಮೀಟರುಗಳಷ್ಟು ಒಳಕ್ಕೆ ಬಂದಿರುವುದಾಗಿ ಹೇಳುತ್ತಾರೆ. ಉಳ್ಳಾಲ, ಕೋಟೆಪುರ ಮತ್ತಿತರ ಕಡೆಗಳಲ್ಲಿ ಕಲ್ಕೊರೆತ ತಡೆಗೆ ತೆಗೆದುಕೊಂಡಿರುವ ಕ್ರಮದಿಂದ ಕಡಲ್ಕೊರೆತ ನಿಂತಿಲ್ಲ. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿಯೂ ರಾಜಕಾರಣಿಗಳಿಗೆ ನೀಡುವುದಕ್ಕೊಂದು ಭರವಸೆ ರೆಡಿ ಇದ್ದ ಹಾಗಾಯ್ತು.

ಕಡಲು ದಂಡೆಯ ಕೊರೆಯುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X