‘ಕನ್ನಡ ಸಾಹಿತ್ಯ ಲೋಕಕ್ಕೆ ಆನಂದಕಂದರು ಮರೆತುಹೋದರಾ?’

‘ಕನ್ನಡ ಸಾಹಿತ್ಯ ಲೋಕಕ್ಕೆ ಆನಂದಕಂದರು ಮರೆತುಹೋದರಾ?’
ಕರ್ನಾಟಕ ಸಂಘದಿಂದ ಸಾಹಿತ್ಯ ಪ್ರಶಸ್ತಿ ಪ್ರದಾನ

ಶಿವಮೊಗ್ಗ : ಆನಂದಕಂದ ಅಂತಲೇ ಹೆಸರಾಗಿದ್ದ ಬೆಟಗೇರಿ ಕೃಷ್ಣಶರ್ಮ ಅವರನ್ನು ಕನ್ನಡ ಸಾಹಿತ್ಯ ಲೋಕ ಮರೆಯುವ ಮೂಲಕ ಅನ್ಯಾಯ ಮಾಡಿದೆ ಎಂದು ಪ್ರಾಧ್ಯಾಪಕ ರಾಘವೇಂದ್ರ ಪಾಟೀಲ್‌ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ‘ಆನಂದ ಕಂದ- ನೂರರನೆನಪು’ ಮತ್ತು ವಾರ್ಷಿಕ ಸಾಹಿತ್ಯ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ರಾಘವೇಂದ್ರ ಪಾಟೀಲ್‌ ಆನಂದಕಂದರ ಬದುಕು- ಬರಹಗಳ ಬಗ್ಗೆ ಮಾತಾಡುತ್ತಿದ್ದರು.

ದಲಿತ, ಪ್ರಗತಿಶೀಲ, ಬಂಡಾಯ ಇತ್ಯಾದಿ ಸಾಹಿತ್ಯ ಸೃಷ್ಟಿ ಇತ್ತೀಚಿನ ದಶಕದಲ್ಲಿ ಆಗಿರುವಂಥದ್ದಲ್ಲ. 1930ರ ದಶಕದಲ್ಲಿ ಹೊರಬಂದ ಆನಂದಕಂದರ ಸಾಹಿತ್ಯದಲ್ಲೇ ಇವನ್ನು ಕಾಣಬಹುದು. ಕನ್ನಡ ಸಾಂಸ್ಕೃತಿಕ ಜೀವನದ ಮಹತ್ತರ ಕಾಲದಲ್ಲಿ ಆನಂದಕಂದರ ಕೃತಿಗಳು ಬಂದವು. ಆನಂದಕಂದರನ್ನು ನವೋದಯ ಕಾಲದ ಪ್ರತಿಬಿಂಬ ಎಂದರೂ ಅತಿಶಯೋಕ್ತಿಯಾಗಲಾರದು ಎಂದರು.

ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇಟ್ಟುಕೊಂಡಿದ್ದ ಆನಂದಕಂದರು ಭೂ ಒಡೆತನದ ಕಲ್ಪನೆಯನ್ನು ಕೂಡ ತಮ್ಮ ಸಾಹಿತ್ಯದಲ್ಲಿ ಗುರುತಿಸಿದ್ದರು. ಅಂಥ ಮಹಾನ್‌ ವ್ಯಕ್ತಿಯ ಪುಸ್ತಕಗಳು ಇವತ್ತು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರ ಗಂಭೀರವಾಗಿ ಚಿಂತಿಸಲಿ ಎಂದು ಕರೆ ಕೊಟ್ಟರು.

ಕರ್ನಾಟಕ ಸಂಘ ಪ್ರಕಟಿಸಿದ್ದ ವಿವಿಧ ಪ್ರಶಸ್ತಿಗಳನ್ನು ಅಖಿಲ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ವಿತರಿಸಿದರು. ಪ್ರಶಸ್ತಿ ಪಡೆದ ಸಾಹಿತಿ- ಕವಿಗಳು ಇವರು-

ಡಿ.ಎಸ್‌.ರಾಮಸ್ವಾಮಿ (ಡಾ.ಜಿ.ಎಸ್‌.ಶಿವರುದ್ರಪ್ಪ ಪ್ರಶಸ್ತಿ)
ಚಿ.ಶ್ರೀನಿವಾಸ ರಾಜು (ಕೆ.ವಿ.ಸುಬ್ಬಣ್ಣ ಪ್ರಶಸ್ತಿ)
ಸತ್ಯಮೂರ್ತಿ ಆನಂದೂರು (ಡಾ.ಹಾ.ಮ.ನಾಯಕ ಪ್ರಶಸ್ತಿ)
ಅಬ್ಬಾಸ್‌ ಮೇಲಿನ ಮನೆ (ಪಿ.ಲಂಕೇಶ್‌ ಪ್ರಶಸ್ತಿ)
ಡಾ.ಕೃಷ್ಣಮೂರ್ತಿ ಹನೂರು (ಡಾ.ಯು.ಆರ್‌.ಅನಂತಮೂರ್ತಿ ಪ್ರಶಸ್ತಿ)
ಜಾನಕಿ ಸುಂದರೇಶ್‌ (ಎಂ.ಕೆ.ಇಂದಿರಾ ಪ್ರಶಸ್ತಿ)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+