ರಾಜ್ಯಕ್ಕೆ ಆ.1ರಂದು ತ್ರಿಶೂಲ ಖ್ಯಾತಿಯ ಪ್ರವೀಣ್ ತೊಗಾಡಿಯಾ
ರಾಜ್ಯಕ್ಕೆ ಆ.1ರಂದು ತ್ರಿಶೂಲ ಖ್ಯಾತಿಯ ಪ್ರವೀಣ್ ತೊಗಾಡಿಯಾ
ಭಜರಂಗ ದಳದ ಪ್ರಮೋದ್ ಮುತಾಲಿಕಗೆ ಮುಚ್ಚಿದ ಅಥಣಿ ಕದ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹಾಗೂ ಕಾಶಿ ಮತ್ತು ಮಥುರಾ ಹೋರಾಟಕ್ಕಾಗಿ ವಿಹೆಚ್‌ಪಿ ಮತ್ತು ಭಜರಂಗ ದಳ ಕೈ ಜೋಡಿಸಿವೆ. ಈ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡದೇ ಇದ್ದಲ್ಲಿ ಹಿಂದೂಗಳು ಬಿಜೆಪಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಬಿಜೆಪಿಗೆ ಎಚ್ಚರಿಕೆ ನೀಡಿದರು.
ಭಯೋತ್ಪಾದಕ ಮುಸ್ಲಿಂ ಸಂಘಟನೆಗಳು ಕರ್ನಾಟಕದಲ್ಲಿ ಶಾಂತಿಯನ್ನು ಕದಡುತ್ತಿದ್ದು ಈ ಬಗ್ಗೆ ಹಿಂದೂಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಮುತಾಲಿಕ್ ಕರೆ ನೀಡಿದರು.
ಅಥಣಿ ಪ್ರವೇಶ ನಿಷೇಧ : ಭಜರಂಗ ದಳದ ನಾಯಕ ಪ್ರಮೋದ್ ಮುತಾಲಿಕ್ ಅವರ ಅಥಣಿ ತಾಲ್ಲೂಕು ಪ್ರವೇಶವನ್ನು ನಿಷೇಧಿಸಿ ಬೆಳಗಾಂ ಜಿಲ್ಲೆ ಅಥಣಿಯ ತಹಸೀಲ್ದಾರರು ಆದೇಶ ಹೊರಡಿಸಿದ್ದಾರೆ. ಮುತಾಲಿಕ್ ಅವರು ಹುತಾತ್ಮರಾದ ಕಾರ್ಗಿಲ್ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ದರೂರ್ ಗ್ರಾಮಕ್ಕೆ ಆಗಮಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದರೆ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ತಾವು ಅಥಣಿಯನ್ನು ಪ್ರವೇಶಿಸಲಿರುವುದಾಗಿ ಸೋಮವಾರದ ಸುದ್ದಿಗೋಷ್ಠಿಯಲ್ಲಿ ಮುತಾಲಿಕ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications