ಸಚಿವ ಮಲ್ಲಿಕಾರ್ಜುನ ಖರ್ಗೆ ಗೃಹದಲ್ಲಿ ಸಾಲು ಸಾಲು ಹೂಗುಚ್ಛ!

ಸಚಿವ ಮಲ್ಲಿಕಾರ್ಜುನ ಖರ್ಗೆ ಗೃಹದಲ್ಲಿ ಸಾಲು ಸಾಲು ಹೂಗುಚ್ಛ!
ಅರವತ್ತೆರಡಕ್ಕೆ ಕಾಲಿಟ್ಟ ಖರ್ಗೆ, ಸಾವಿರಾರು ಅಭಿಮಾನಿಗಳ ಶುಭಾಶಯ

ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜುಲೈ 21ರ ಸೋಮವಾರ 62 ತುಂಬಿತು.

ಖರ್ಗೆ ಅವರ ತವರು ನೆಲದಲ್ಲಿ ಮಳೆ ಸುರಿಯದಿದ್ದರೂ, ಸೋಮವಾರ ಖರ್ಗೆ ನಿವಾಸದಲ್ಲಿ ಮಳೆ ಮಳೆ ಮಳೆ; ಇದು ಶುಭಾಯಗಳ ಸುರಿಮಳೆ. ಅಭಿಮಾನಿಗಳು, ಸಚಿವರು, ಗೆಳೆಯರು, ಹಿಂಬಾಲಕರು, ಅಧಿಕಾರಿಗಳು, ಪ್ರತಿಪಕ್ಷಗಳ ಮುಖಂಡರು ಶುಭಾಶಯಗಳನ್ನು ಕೋರಿದವರ ಸಾಲಿನಲ್ಲಿದ್ದರು. ಖುದ್ದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಶುಭಾಶಯ ಕೋರಿದರು. ಖರ್ಗೆ ನಕ್ಕರು.

ಹಿರಿಯ ಸಚಿವರಾದ ಧರ್ಮಸಿಂಗ್‌, ಎಚ್‌.ಕೆ.ಪಾಟೀಲ್‌ ಸೇರಿದಂತೆ ಸಚಿವರ ದಂಡು ಹಾಗೂ ಕಾರ್ಯಕರ್ತರ ಹಿಂಡು ಖರ್ಗೆ ಅವರ ನಿವಾಸದಲ್ಲಿ ಹಾಜರಿ ಹಾಕಿ ಬಂದಿತ್ತು . ವಿಧಾನಮಂಡಲದಲ್ಲೂ ಖರ್ಗೆ ಅವರಿಗೆ ಶುಭಾಶಯಗಳು ಸಂದವು.

ಖರ್ಗೆ ಅವರ 62ನೇ ಹುಟ್ಟುಹಬ್ಬಕ್ಕೆಂದು ಅಭಿಮಾನಿಗಳು ಬೃಹತ್‌ ಕೇಕು ಸಿದ್ಧಪಡಿಸಿದ್ದರು. ಖರ್ಗೆ ಕೇಕು ಕತ್ತರಿಸಿದರು. ಹುಟ್ಟುಹಬ್ಬ ಆಚರಿಸಿಕೊಂಡ ಪತಿರಾಯನ ಬಾಯಿಗೆ ರಾಧಾ ಖರ್ಗೆ ಕೇಕಿನ ತುಂಡಿಟ್ಟರು. ಅಭಿಮಾನಿಗಳು ಚಪ್ಪಾಟೆ ತಟ್ಟಿದರು. ಸಾಲು ಸಾಲು ಹೂಗುಚ್ಛ !

ಅಂದಹಾಗೆ, ಭೀಮನ ಅಮಾವಾಸ್ಯೆ ಹತ್ತಿರಬರುತ್ತಿದೆ. ನೆನಪಿದೆಯಾ ಗೃಹಮಂತ್ರಿಗಳೇ !?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+