ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮೂಲದ ಕವಯಿತ್ರಿ ಮಗು ಕೊಂದು, ತಾನೂ ಸತ್ತಳು

By Staff
|
Google Oneindia Kannada News

ಭಾರತೀಯ ಮೂಲದ ಕವಯಿತ್ರಿ ಮಗು ಕೊಂದು, ತಾನೂ ಸತ್ತಳು
ರೀತಿಕ ವಜಿರಾನಿ ಚೆಂದದ ಕವನಗಳ ಬರೆದು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಳು

ವಾಷೀಂಗ್ಟನ್‌ : ಭಾರತೀಯ ಮೂಲದ ಪ್ರಶಸ್ತಿ ವಿಜೇತ ಕವಯಿತ್ರಿ ರೀತಿಕ ವಜಿರಾನಿ ತನ್ನ ಎರಡು ವರ್ಷದ ಮಗುವನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮಗುವಿನ ನಾಡಿ ಕತ್ತರಿಸಿ, ತಾನೂ ಹಾಗೆಯೇ ಮಾಡಿಕೊಂಡು ಚೆವಿ ಚೇಸ್‌ ಏರಿಯಾದ ಗೆಳೆಯರೊಬ್ಬರ ಮನೆಯ ಡೈನಿಂಗ್‌ ಹಾಲಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ 40 ವರ್ಷ ವಯಸ್ಸಿನ ವಜಿರಾನಿ ಹೆಣವಾಗಿದ್ದಳು. ಮುಗ್ಧ ಮಗು ಜೆಹಾನ್‌ ವಜಿರಾನಿ ಕೋಮುನ್ಯಕ ಕೂಡ ಬರ್ಬರ ಹತ್ಯೆಗೆ ಈಡಾಗಿತ್ತು. ಕಾದಂಬರಿಕಾರ ನಾರ್ಮನ್‌ ಮತ್ತು ಕವಯಿತ್ರಿ ಜೇನ್‌ ಶೋರ್‌ ಮನೆಯಲ್ಲಿ ಈ ದುರ್ಘಟನೆ ನಡೆಯಿತು.

ಅಮೆರಿಕೆಯಲ್ಲಿ ರೀತಿಕ ಕವಯಿತ್ರಿಯಾಗಿ ಹೆಸರು ಮಾಡಿದ್ದಳು
ಆರನೇ ವಯಸ್ಸಿನಲ್ಲೇ ಭಾರತದಿಂದ ಅಮೆರಿಕಗೆ ಹಾರಿದ ರೀತಿಕ ತನ್ನ 25ನೇ ವಯಸ್ಸಲ್ಲಿ ಕವನಗಳನ್ನು ಬರೆಯಲು ಶುರುಮಾಡಿದಳು. 1996ರಲ್ಲಿ ಈಕೆ ಬರೆದ ‘ವೈಟ್‌ ಎಲಿಫೆಂಟ್ಸ್‌’ ಕವನ ಸಂಕಲನಕ್ಕೆ ಬರ್ನಾರ್ಡ್‌ ನ್ಯೂ ವುಮೆನ್‌ ಪೊಯೆಟ್ಸ್‌ ಬಹುಮಾನ ಸಂದಿತ್ತು. ವರ್ಲ್ಡ್‌ ಹೊಟೆಲ್‌ ಎಂಬ ಇನ್ನೊಂದು ಕವನ ಸಂಕಲನಕ್ಕೆ ಈ ವರ್ಷದ ಆ್ಯನಿಸ್‌ಪೀಲ್ಡ್‌ ವುಲ್ಫ್‌ ಪುಸ್ತಕ ಪ್ರಶಸ್ತಿ ಸಿಕ್ಕಿದೆ. ಈಕೆಯ ಗಂಡ ಕೂಡ ಅಮೆರಿಕೆಯಲ್ಲಿ ಸದ್ದು ಮಾಡಿದ ಕವಿ. ಆತನ ಹೆಸರು ಯೂಸಫ್‌ ಕೋಮುನ್ಯಕ. ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಈತನಿಗೆ ಪುಲಿಟ್ಜರ್‌ ಪ್ರಶಸ್ತಿ ಸಂದಿದೆ.

ರೀತಿಕಾಳನ್ನು ಹತ್ತಿರದಿಂದ ಬಲ್ಲವರು, ಆಕೆ ತೀರಾ ಭಾವುಕ ಸ್ವಭಾವದವಳಾಗಿದ್ದಳು. ಮಗುವಿನ ಬಗ್ಗೆ ತುಂಬಾ ಪ್ರೀತಿಯಿಟ್ಟುಕೊಂಡಿದ್ದಳು. ಆದರೆ ಗಂಡನ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದು ಉಂಟು ಎಂದು ಹೇಳಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X