ವಿದ್ಯುತ್‌ ಇಲ್ಲ-ರಸ್ತೇಲಿ ಗುಂಡಿ ; ಕೃಷ್ಣ ಸರ್ಕಾರಕ್ಕೆ ಪ್ರೇಂಜಿ ಧಮಕಿ

ವಿದ್ಯುತ್‌ ಇಲ್ಲ-ರಸ್ತೇಲಿ ಗುಂಡಿ ; ಕೃಷ್ಣ ಸರ್ಕಾರಕ್ಕೆ ಪ್ರೇಂಜಿ ಧಮಕಿ
ಮೂಲಭೂತ ಸೌಕರ್ಯಗಳ ಉತ್ತಮಪಡಿಸದಿದ್ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ

ಬೆಂಗಳೂರು : ನಗರದ ಹೊರವಲಯದಲ್ಲಿರುವ ಸರ್ಜಾಪುರ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್‌ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಸರಕಾರ ಗಮನ ಹರಿಸದೇ ಇದ್ದಲ್ಲಿ ಉಗ್ರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಮ್‌ ಪ್ರೇಮ್‌ಜಿ ಎಸ್ಸೆಂ.ಕೃಷ್ಣ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರ್ಜಾಪುರ ವ್ಯಾಪ್ತಿಯಲ್ಲಿ ವಿಪ್ರೋ ಕಂಪೆನಿಯ ಕಚೇರಿಗಳಿವೆ. ಸರ್ಜಾಪುರ ರಸ್ತೆ ಅತ್ಯಂತ ಅವ್ಯವಸ್ಥಿತವಾಗಿದ್ದು, ಪ್ರತಿದಿನ ಒಂದಲ್ಲ ಒಂದು ಅಪಘಾತಗಳಾಗುತ್ತಿರುತ್ತವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಂಜಿ ಹೇಳಿದರು. ಈ ರಸ್ತೆಗಳ ಉನ್ನತಿಗೆ ಬಂಡವಾಳ ಹೂಡದೇ ಇರುವ ಸರಕಾರವನ್ನು ಅವರು ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಮೂಲಭೂತ ಸೌಕರ್ಯಗಳು ಚೆನ್ನಾಗಿಲ್ಲವಾದ್ದರಿಂದ ಬಿಪಿಒ ಫೆಸಿಲಿಟಿ ಅಥವಾ ಅಭಿವೃದ್ಧಿ ಕೇಂದ್ರವನ್ನು ತೆರೆಯುವ ಯೋಜನೆ ವಿಪ್ರೋಗಿಲ್ಲ. ಸರ್ಜಾಪುರದಲ್ಲಿ ಆಗಾಗ ವಿದ್ಯುತ್‌ ಕೈ ಕೊಡುತ್ತಿರುತ್ತದೆ. ವಿಪ್ರೋ ಸಂಸ್ಥೆಯಲ್ಲಿ ಗ್ರಾಹಕರ ಜೊತೆಗೆ ಚರ್ಚೆ ನಡೆಸುತ್ತಿರುವಾಗ ಒಂದು ಗಂಟೆ ಅವಧಿಯಲ್ಲಿ ನಾಲ್ಕು ಬಾರಿ ವಿದ್ಯುತ್‌ ಕೈ ಕೊಡುತ್ತದೆ.

ಸರ್ಜಾಪುರ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ವಸತಿ ನಿಲಯಗಳು ಅತ್ಯಂತ ವೇಗವಾಗಿ ತಲೆಯೆತ್ತುತ್ತಿವೆ. ಇಲ್ಲಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸದೇ ಇದ್ದರೆ ಇನ್ನೆರಡು ವರ್ಷಗಳಲ್ಲಿ ಈ ರಸ್ತೆಯಲ್ಲಿ ಟ್ರಾಫಿಕ್‌ ಅಧ್ವಾನವಾಗಲಿದೆ ಎಂದು ಪ್ರೇಮ್‌ಜಿ ಸರಕಾರವನ್ನು ಎಚ್ಚರಿಸಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+