ಪರಗೋಡು-ತುಂಗಾ ಯೋಜನೆಗೆ ಜಲ ಆಯೋಗದ ಬೆಂಬಲ
ಪರಗೋಡು-ತುಂಗಾ ಯೋಜನೆಗೆ ಜಲ ಆಯೋಗದ ಬೆಂಬಲ
ಆಂಧ್ರದ ತಕರಾರಿನಲ್ಲಿ ಹುರುಳಿಲ್ಲ
ಪರಗೋಡು ಮತ್ತು ತುಂಗಾ ಮೇಲ್ದಂಡೆ ಯೋಜನೆ ಕುರಿತು ರಾಜ್ಯಕ್ಕೆ ಯಾವುದೇ ನಿರ್ದೇಶನವನ್ನು ಕೇಂದ್ರ ನೀಡುವುದಿಲ್ಲ. ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಗಲಾಟೆಯನ್ನು ಸಂಧಾನ ಅಥವಾ ಮಾತುಕತೆಯ ಮೂಲಕ ಪರಿಹಾರ ಸೂಚಿಸುವ ಉದ್ದೇಶವಷ್ಟೇ ಕೇಂದ್ರ ಸರಕಾರಕ್ಕಿದೆ ಎಂದು ಜಲ ಆಯೋಗ ಸ್ಪಷ್ಟಪಡಿಸಿದೆ.
ಕೇಂದ್ರೀಯ ಜಲ ಆಯೋಗದ ಮುಖ್ಯಸ್ಥ ಜಯಶೀಲನ್ ಅಧ್ಯಕ್ಷತೆಯಲ್ಲಿ ಕಳೆದ ಜೂನ್ 27ರಂದು ನಡೆದ ಸಭೆ- ನಿರ್ಣಯಗಳು ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಪರಗೋಡು ಯೋಜನೆ ಕುಡಿಯುವ ನೀರು ಪೂರೈಕೆಯ ಯೋಜನೆಯೇ ವಿನಃ ಆಂಧ್ರಪ್ರದೇಶ ಆಪಾದಿಸಿರುವಂತೆ ನೀರಾವರಿ ಯೋಜನೆ ಅಲ್ಲ ಎಂದು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications