ಒಕ್ಕಲಿಗರ ಸಂಘದ ನಿರ್ದೇಶಕರಾಗಿ ವೆಂಕಟಗಿರಿಗೌಡ ಆಯ್ಕೆ
ಒಕ್ಕಲಿಗರ ಸಂಘದ ನಿರ್ದೇಶಕರಾಗಿ ವೆಂಕಟಗಿರಿಗೌಡ ಆಯ್ಕೆ
16 ಸಾವಿರ ಮತದಾರರ ಪೈಕಿ ಮತ ಹಾಕಿದ್ದು 11,300 ಮಂದಿ ಮಾತ್ರ
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಗರದ ಬನಶಂಕರಿಯಲ್ಲಿ ಸೋಮವಾರ (ಜು.14) ಮತ ಎಣಿಕೆ ನಡೆಯಿತು. ವೆಂಕಟಗಿರಿ ಗೌಡ, ಕೆಂಚಪ್ಪ ಗೌಡ, ಪುಟ್ಟಣ್ಣ, ಅಂಜನಪ್ಪ, ಕೃಷ್ಣಪ್ಪ, ಬಿ. ಎನ್. ಗೋಪಾಲಗೌಡ, ಡಾ. ಚಿಕ್ಕಮೊಗ, ಎ. ದೇವೇಗೌಡ, ನಾರಾಯಣ ಗೌಡ, ಮುನೇಗೌಡ, ಡಾ. ಅಪ್ಪಾಜಿ ಗೌಡ, ಹನುಮಂತೇ ಗೌಡ, ಪಾರ್ಥಸಾರಥಿ, ಕಾಳೇಗೌಡ, ಡಾ. ವಿಠ್ಠಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಡಿ. ಎಸ್. ಅಶ್ವತ್ಥ್ ತಿಳಿಸಿದ್ದಾರೆ.
ಆಯ್ಕೆಯಾದ ಇತರೆ ನಿರ್ದೇಶಕರು :
ಮೈಸೂರು-ಕೆ. ಮಹಾದೇವ್, ಡಿ. ವೆಂಕಟೇಶ್, ಎಚ್ಕೆ. ರಮೇಶ್(ರವಿ). ಚಿತ್ರದುರ್ಗ- ಆರ್. ಮಂಜುನಾಥ್. ಮಂಗಳೂರು- ಡಾ. ರೇಣುಕಾ ಸ್ವಾಮಿ ಕೆ. ವಿ., ಚಿಕ್ಕಮಗಳೂರು- ಬಿ. ಆರ್. ಅರುಣ್, ತುಮಕೂರು- ಪಿ. ಡಿ. ನಾಗರಾಜ್, ಬಿ. ಎಚ್. ಜಗದೀಶ್, ಕೊಡಗು- ಶಾಸಕ ಎ. ಮಂಜು, ಶಿವಮೊಗ್ಗ- ಕೆ. ಸಿ. ದಿನೇಶ್, ಹಾಸನ- ಬಸವೇಗೌಡ, ಎಸ್. ಟಿ. ರಾಜಶೇಖರ್, ಎ. ಆರ್. ವಾಸುದೇವ್, ಕೋಲಾರ- ಸದಾಶಿವ ರೆಡ್ಡಿ ಆರರ್., ರಮೇಶ್, ಕೆ. ಟಿ. ಶ್ರೀನಿವಾಸ್, ಎಚ್. ಎಲ್. ಶಿವಣ್ಣ, ಲೋಕೇಶ್ ಬಾಬು, ಎಚ್. ಟಿ. ಕೃಷ್ಣೇ ಗೌಡ.
ಬೆಂಗಳೂರು ನಗರ ಮತ್ತು ಗ್ರಾಮಾಂತರಕ್ಕೆ ಸೇರಿದಂತೆ 16 ಸಾವಿರ ಮತದಾರರಲ್ಲಿ ಸುಮಾರು 11, 300 ಮಂದಿ ಮತ ಚಲಾಯಿಸಿದ್ದಾರೆ.
(ಸ್ನೇಹ - ಸೇತು: ವಿಜಯ ಕರ್ನಾಟಕ)
ಮುಖಪುಟ / ವಾರ್ತೆಗಳು












Click it and Unblock the Notifications