ಬಸವರಾಜ ಪಾಟೀಲರು ಕರೆಂಟು ಕೊಡಿಸುವ ಮಾತಾಡಿ ಪೆಚ್ಚಾದದ್ದು
ಬಸವರಾಜ ಪಾಟೀಲರು ಕರೆಂಟು ಕೊಡಿಸುವ ಮಾತಾಡಿ ಪೆಚ್ಚಾದದ್ದು
ಹೀಗಿರ್ತಾರೆ ನಮ್ ರಾಜಕಾರಣಿಗಳು...
ಇಂಧನ ಸಚಿವ ಬಸವರಾಜ ಪಾಟೀಲ್ ಹುಮ್ನಾಬಾದ್ : ಆ ಹಳ್ಳಿಗೆ ವಿದ್ಯುತ್ ಕಲ್ಪಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರ್ ಲ್ಯಾಂಪ್ಸ್‌ಗೆ ವಹಿಸಿದ್ದೇವೆ. ಆ ಕಂಪನಿ ಹಳ್ಳಿಗೆ ಉಪಕರಣಗಳನ್ನು ಸಾಗಿಸಿ, ಆಗಸ್ಟ್ ತಿಂಗಳ ಹೊತ್ತಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಶುರು ಮಾಡಲಿದೆ.
ತಾನು ಏನು ಹೇಳುತ್ತಿದ್ದೇನೆ ಎಂಬ ಪರಿಜ್ಞಾನವೇ ಇಲ್ಲದಂತೆ ಬಸವರಾಜ ಪಾಟೀಲರು ಮಂಗಳವಾರ (ಜು.15) ವಿಧಾನಸಭೆಯಲ್ಲಿ ಉತ್ತರ ಕೊಡುತ್ತಿದ್ದರು. ವಿರೋಧ ಪಕ್ಷ ಬಿಜೆಪಿಯ ಸಕಲರೂ ಗೊಳ್ಳೆಂದು ನಕ್ಕಾಗ ಪಾಟೀಲರು ಪೆಚ್ಚಾದರು.
ಸರ್ಕಾರವೇ ಮುಚ್ಚಿರುವ ಮೈಸೂರ್ ಲ್ಯಾಂಪ್ಸ್‌ಗೆ ಹಳ್ಳಿಗೆ ಕರೆಂಟು ಕೊಡುವ ಕೆಲಸ ವಹಿಸಿದ್ದಾರಪ್ಪೋ ಅಂತ ಕಟಕಿಯಾಡಿದಾಗಂತೂ ಪಾಟೀಲರು ಹ್ಯಾಪುಮೋರೆ ಹಾಕಿಕೊಂಡರು. ಈ ಪ್ರಶ್ನೆಗೆ ಪರಿಶೀಲಿಸಿ, ಆಮೇಲೆ ಉತ್ತರ ಕೊಡುವುದಾಗಿ ಅವರು ಹೇಳಿದರೂ ಲೇವಡಿಯ ನಗೆ ವಿಧಾನಸಭೆಯಲ್ಲಿ ತುಂಬಿ ತುಳುಕಿತು. ಜನ ಪ್ರತಿನಿಧಿಗಳು ಇಷ್ಟೊಂದು ಬೇಜವಾಬ್ದಾರಿತನದಿಂದ ವರ್ತಿಸಿದರೆ ಹೇಗೆ ಸ್ವಾಮಿ?
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications