ಏಕರೂಪ ಶಾಸನ ವಿರುದ್ಧ ಉಡುಪಿ ಸ್ವಾಮೀಜಿಗಳು ಕೋರ್ಟ್‌ಗೆ
ಏಕರೂಪ ಶಾಸನ ವಿರುದ್ಧ ಉಡುಪಿ ಸ್ವಾಮೀಜಿಗಳು ಕೋರ್ಟ್‌ಗೆ
ಶ್ರೀಕೃಷ್ಣ ದೇವರ ಸ್ಥಳ ಮಠವೇ ಹೊರತು ಮಂದಿರವಲ್ಲ ..
ಶ್ರೀಕೃಷ್ಣ ಮಠದ ಬಗೆಗಿರುವ ಸಂಪೂರ್ಣ ದಾಖಲೆ ಸಲ್ಲಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಈಗಾಗಲೇ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಮಠದ ಆಡಳಿತ ಮಂಡಳಿ ಪ್ರಕಟಿಸಿದೆ. ರಾಜ್ಯದ ಕಾನೂನು ಸಲಹೆಗಾರರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅನಂತ್‌ಕುಮಾರ್ ಅವರಿಗೆ ಏಕ ರೂಪ ಶಾಸನದಿಂದ ಶ್ರೀಕೃಷ್ಣ ಮಠವನ್ನು ಹೊರಗಿಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಮಠದ ಬೆಂಗಳೂರು ಪ್ರತಿನಿಧಿ ಎ. ಆರ್. ತಂತ್ರಿ ಕಾನೂನು ಹೋರಾಟಕ್ಕೆ ನೆರವು ನೀಡಲಿರುವುದಾಗಿ ಪ್ರಕಟಣೆ ಹೇಳಿದೆ. ಶ್ರೀಕೃಷ್ಣ ದೇವರ ಈ ಸ್ಥಳ ಮಠವೇ ಹೊರತು ಮಂದಿರವಲ್ಲ ಎಂದು ಅಷ್ಟ ಮಠದ ಸ್ವಾಮೀಜಿಗಳು ಒಗ್ಗಟ್ಟಿನಿಂದ ಕಾನೂನು ಸಮರ ನಡೆಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications