ರಾಜ್ಯದಲ್ಲಿ ಡೆಂಗ್ಯೂ : 192 ಮಂದಿಗೆ ಸೋಂಕು, ಇಬ್ಬರ ಸಾವು

ರಾಜ್ಯದಲ್ಲಿ ಡೆಂಗ್ಯೂ : 192 ಮಂದಿಗೆ ಸೋಂಕು, ಇಬ್ಬರ ಸಾವು
ಸೊಳ್ಳೆಗಳ ನಾಶಕ್ಕೆ ವ್ಯಾಪಕ ಕ್ರಮ, ತಾತ್ಕಾಲಿಕ ಆರೋಗ್ಯ ಕೇಂದ್ರಗಳ ಸಾವು

ಬೆಂಗಳೂರು : ರಾಜ್ಯದಲ್ಲಿ 192 ಮಂದಿ ಮಾರಣಾಂತಿಕ ಡೆಂಗ್ಯೂ ಜ್ವರ ಸೋಂಕಿಗೆ ಒಳಗಾಗಿದ್ದು , ಇಬ್ಬರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

ಡೆಂಗ್ಯೂ ಜ್ವರದ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ರಾಜ್ಯ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಈವರೆಗೆ ರಾಜ್ಯದಲ್ಲಿ ಇಬ್ಬರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಸೋಮವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಕಾಂಗ್ರೆಸ್ಸಿನ ಕೆ.ಸಿ.ಕೊಂಡಯ್ಯ ಅವರ ಪ್ರಶ್ನೆಗೆ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸುತ್ತಿದ್ದರು.

ರಕ್ತ ಸ್ಯಾಂಪಲ್‌ಗಳ ಪರೀಕ್ಷೆಗೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಅವಶ್ಯವಿರುವೆಡೆ ಪ್ರಾರಂಭಿಸಲಾಗಿದೆ. ಸೊಳ್ಳೆಗಳ ನಾಶಕ್ಕೆ ವ್ಯಾಪಕ ಕ್ರಮ ಕೈಗೊಂಡಿದ್ದು - ಕ್ರಿಮಿನಾಶಕಗಳನ್ನು ಸಿಂಪರಿಸಲಾಗುತ್ತಿದೆ ಎಂದು ಸಚಿವ ತಿಮ್ಮಪ್ಪ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+