ಧ್ವನ್ಯಾಲೋಕದ ಸಿ.ಡಿ.ನರಸಿಂಹಯ್ಯಗೆ ಕೆ.ವಿ.ಶಂಕರಗೌಡ ಪ್ರಶಸ್ತಿ

ಧ್ವನ್ಯಾಲೋಕದ ಸಿ.ಡಿ.ನರಸಿಂಹಯ್ಯಗೆ ಕೆ.ವಿ.ಶಂಕರಗೌಡ ಪ್ರಶಸ್ತಿ
ಶ್ರೀನಿವಾಸ ಜಿ.ಕಪ್ಪಣ್ಣನವರಿಗೆ ರಂಗಭೂಮಿ ಪ್ರಶಸ್ತಿ

ಮಂಡ್ಯ : ಮೈಸೂರಿನ ಧ್ವನ್ಯಾಲೋಕದ ರೂವಾರಿ ಡಾ. ಸಿ.ಡಿ. ನರಸಿಂಹಯ್ಯ ಅವರು ಪ್ರತಿಷ್ಠಿತ ಕೆ.ವಿ.ಶಂಕರಗೌಡ ಸಮಾಜ ಸೇವಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೆ.ವಿ.ಶಂಕರಗೌಡ ಪ್ರತಿಷ್ಠಾನದ 2003 ನೇ ಇಸವಿಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು , ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಿರಿಯರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಡಾ. ಸಿ.ಡಿ. ನರಸಿಂಹಯ್ಯ ಅವರನ್ನು ಸಮಾಜ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಿದ್ಧ ರಂಗಭೂಮಿ ತಜ್ಞ ಬೆಂಗಳೂರಿನ ಶ್ರೀನಿವಾಸ ಜಿ.ಕಪ್ಪಣ್ಣ , ಮಂಡ್ಯದ ರಂಗ ಕಲಾವಿದ ಎಂ.ಎಸ್‌.ನಾಗಾರಾಜಾಚಾರ್‌ ಅವರನ್ನು ರಂಗಭೂಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಮಾಜ ಸೇವಾ ಕ್ಷೇತ್ರದ ಪ್ರಶಸ್ತಿಯನ್ನು 1996ರಿಂದ ಶಂಕರಗೌಡ ಪ್ರತಿಷ್ಠಾನ ನೀಡುತ್ತಿದೆ. ಅದೇರೀತಿ ರಂಗಭೂಮಿ ಪ್ರಶಸ್ತಿಯನ್ನು 1990ರಿಂದ ನೀಡಲಾಗುತ್ತಿದೆ.

15 ಸಾವಿರ ರುಪಾಯಿ ನಗದು ಹಾಗೂ ಸ್ಮರಣ ಫಲಕವನ್ನು ಶಂಕರಗೌಡ ಪ್ರಶಸ್ತಿ ಒಳಗೊಂಡಿದೆ. ಜುಲೈ 15ರಂದು ಮಂಡ್ಯದ ರೈತ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಗಳೂರು ಮತ್ತು ಗೋವಾ ವಿಶ್ವ ವಿದ್ಯಾಲಗಳ ನಿವೃತ್ತ ಕುಲಪತಿ ಡಾ. ಶೇಕ್‌ ಆಲಿ ಪ್ರಶಸ್ತಿ ಪ್ರದಾನ ಮಾಡುವರು. ಪ್ರೊ. ಸಿ.ನಾಗಣ್ಣ ಅಭಿನಂದನಾ ಭಾಷಣ ಮಾಡುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+