ರಾಮನಗೌಡ ಚಿಕ್ಕಮೇಟಿ ಸ್ಮಾರಕ ಪ್ರಶಸ್ತಿಗೆ ಬರಹಗಳ ಆಹ್ವಾನ
ರಾಮನಗೌಡ ಚಿಕ್ಕಮೇಟಿ ಸ್ಮಾರಕ ಪ್ರಶಸ್ತಿಗೆ ಬರಹಗಳ ಆಹ್ವಾನ
ಲೇಖನ, ಕತೆ, ವಿಮರ್ಶೆ, ಕವನಗಳನ್ನು ಜುಲೈ 19ರೊಳಗೆ ಕಳುಹಿಸಬಹುದು
2002ನೇ ಜನವರಿ 1ರಿಂದ ಡಿಸೆಂಬರ್ 2002ರೊಳಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನ, ಕತೆ, ವಿಮರ್ಶೆ, ಕವನಗಳನ್ನು ಪ್ರಶಸ್ತಿಗಾಗಿ ಕಳುಹಿಸಬಹುದು. ಪ್ರಶಸ್ತಿ ವಿಜೇತರಿಗೆ ತಾಮ್ರಪತ್ರ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಬಹುಮಾನವಾಗಿ ನೀಡಲಾಗುವುದು. ಬರಹ, ಕತೆ, ಕವನಗಳನ್ನು ಕಳುಹಿಸುವಾಗ ಸ್ಪರ್ಧಿಗಳು ತಮ್ಮ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ಸ್ವ ವಿವರ ಪತ್ರವನ್ನೂ ಲಗತ್ತಿಸುವಂತೆ ಸಂಘದ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 19ರೊಳಗೆ ಬರಹಗಳು ತಲುಪಬೇಕಾದ ವಿಳಾಸ : ಯುವ ಬರಹಗಾರರ ಸಂಘ, ಕೇಂದ್ರ ಸಮಿತಿ, ರೋಕಡಾ ಮಾರುತಿ ದೇವಸ್ಥಾನ, ಬ್ರಹ್ಮಪುರ, ಗುಲ್ಬರ್ಗ - 585103.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications