ಶಾರದ ಸಂಗೀತ ಸಭಾದಿಂದ ಬೆಂಗಳೂರಲ್ಲಿ ಸಂಗೀತೋತ್ಸವ
ಶಾರದ ಸಂಗೀತ ಸಭಾದಿಂದ ಬೆಂಗಳೂರಲ್ಲಿ ಸಂಗೀತೋತ್ಸವ
ಜುಲೈ 11 ರಿಂದ ಮೂರು ದಿನಗಳ ಕಾಲ ಸಂಗೀತ ಪ್ರಿಯರಿಗೆ ಸುಗ್ಗಿ
ಜು.11ರಂದು ಆರ್.ಎ.ರಮಾಮಣಿ ಅವರ ಗಾಯನದೊಂದಿಗೆ ಸಂಗೀತೋತ್ಸವ ಪ್ರಾರಂಭವಾಗಲಿದೆ. ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತಕುಮಾರ್ ಸಂಗೀತೋತ್ಸವನ್ನು ಉದ್ಘಾಟಿಸುವರು ಎಂದು ಶಾರದ ಸಂಗೀತ ಸಭಾದ ಸಲಹೆಗಾರ ಅರಳುಮಲ್ಲಿಗೆ ಪಾರ್ಥಸಾರಥಿ ಸುದ್ದಿಗಾರರಿಗೆ ತಿಳಿಸಿದರು.
ಸಂಗೀತೋತ್ಸವದ ಕಾರ್ಯಕ್ರಮಗಳು ಇಂತಿವೆ :
ಜುಲೈ 12- ಡಾ.ಎನ್.ರಮಣಿ ಅವರ ಕೊಳಲು ವಾದನ
ಜುಲೈ 13- ಆರ್.ಕೆ. ಶ್ರೀಕಂಠನ್ ಅವರ ಸಂಗೀತ ಕಾರ್ಯಕ್ರಮ
ಜುಲೈ 13 ರಂದು ರಾಜ್ಯದ ಹಿರಿಯ ಸಂಗೀತ ಕಲಾವಿದರು ಹಾಗೂ ವಿದ್ವಾಂಸರನ್ನು ಶಾರದ ಸಂಗೀತ ಸಭಾ ಗೌರವಿಸುವುದು. ಇದೇ ಸಂದರ್ಭದಲ್ಲಿ ಸಭಾದ ಸಂಗೀತ ಗೌರವ ಪುರಸ್ಕಾರ ಪ್ರಶಸ್ತಿಯನ್ನು ಅನನ್ಯ ಸಂಸ್ಥೆಗೆ ಪ್ರೊ.ಎಸ್.ಕೆ.ರಾಮಚಂದ್ರರಾವ್ ಪ್ರದಾನ ಮಾಡುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications